ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಭೂಕಂಪನ, 8 ಜನ ಸಾವು

ಇಂಡೋನೇಷ್ಯಾದಲ್ಲಿ ಭೂಕಂಪನ, 8 ಜನ ಸಾವು

ಜಕಾರ್ತಾ, ಎಪ್ರಿಲ್ 12:ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದಲ್ಲಿ ಭೂಕಂಪನ   ಸಂಭವಿಸಿದ್ದು, ಕನಿಷ್ಠ 8 ಜನರು ಮೃತಪಟ್ಟಿದ್ದು, ಇತರೆ  39 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಕಂಪನದ ತೀವ್ರತೆ  ರಿಕ್ಟರ್ ಮಾಪಕದಲ್ಲಿ 6.1ರಷ್ಟು ಎಂದು ದಾಖಲಾಗಿದೆ.  ಲುಮಾಜಾಂಗ್, ಮಲಾಂಗ್, ಬ್ಲಿಟಾರ್, ಜೆಂಬರ್, ಟ್ರೆಂಗ್‌ಗಲೆಕ್ ಮತ್ತು ಬ್ಲಿಟಾರ್ ಸೇರಿದಂತೆ ಹಲವು  ಜಿಲ್ಲೆಗಳಲ್ಲಿ 1,189 ಮನೆಗಳು ಹಾನಿಯಾಗಿದೆ .  ಆರೋಗ್ಯ ಕೇಂದ್ರಗಳು, ಶಿಕ್ಷಣ ಸೌಲಭ್ಯಗಳು, ಪೂಜಾ ಸ್ಥಳಗಳು ಮತ್ತು ಕಚೇರಿ ಕಟ್ಟಡಗಳಂತಹ ನೂರಾರು ಸಾರ್ವಜನಿಕ ಕಟ್ಟಡಗಳು ಸಹ ಹಾನಿಗೊಂಡಿವೆ ಎಂದು ಕ್ಸಿನ್ಹುವಾ ಸುದ್ದಿ- ಸಂಸ್ಥೆ ವರದಿ ಮಾಡಿದೆ.  ಅಕ್ಕಿ, ತ್ವರಿತ ಆಹಾರ ಮತ್ತು ನೂಡಲ್ಸ್ ಮತ್ತು ಕಂಬಳಿ ಮತ್ತು ಟಾರ್ಪಾಲಿನ್ ಇತೆ ಅವಶ್ಯಕ ವಸ್ತುಗಳನ್ನು ಪ್ರಾಂತೀಯ  ಆಡಳಿತವು ವಿತರಿಸಿದೆ. ಕಳೆದ ಕೆಲವು ದಿನಗಳಲ್ಲಿ ಇಂಡೋನೇಷ್ಯಾ ಇತರ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಲೇ ಇದೆ. 


ಸುದ್ದಿ ಓದಿ