ಇಂಡೋನೇಷ್ಯಾ ಭೂಕಂಪ, ಮೃತರ ಸಂಖ್ಯೆ 56 ಕ್ಕೆ ಏರಿಕೆ
ಜಕಾರ್ತಾ, ಜ 17 : ಇಂಡೋನೇಷ್ಯಾದ ಪಶ್ಚಿಮ ಸುಲಾವೆಸಿ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದದಿಂದ ಮೃತಪಟ್ಟವರ ಸಂಖ್ಯೆ 56 ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 826 ಕ್ಕೆ ಏರಿಕೆಯಾಗಿದೆ. ಎಂದು ಬಿಎನ್‌ಪಿಬಿ ಖಚಿತಪಡಿಸಿದೆ. ಪಶ್ಚಿಮ ಸುಲಾವೆಸಿ ಅಧಿಕಾರಿಗಳು ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಒಂದು ಅಥವಾ ಎರಡು ವಾರಗಳಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಬಹುದು ಎಂದು ಬಿಎನ್‌ಪಿಡಿ ಮುಖ್ಯಸ್ಥ ಡೋನಿ ಮೊನಾರ್ಡೊ ಹೇಳಿದ್ದಾರೆ. ಶುಕ್ರವಾರ ಮುಂಜಾನೆ 6.2 ತೀವ್ರತೆಯ ಭೂಕಂಪನವು ಪಶ್ಚಿಮ ಸುಲವೇಸಿಯನ್ನು ನಡುಗಿಸಿತು. ಆರಂಭದಲ್ಲಿ, ಸುಮಾರು 15,ಸಾವಿರ ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.