ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಭಾರಿ ಭೂಕಂಪ: 35 ಸಾವು
ಜಕಾರ್ತಾ, ಜ 15 : ಶುಕ್ರವಾರ ಬೆಳಿಗ್ಗೆ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.2 ರ ತೀವ್ರ ಭೂಕಂಪ ಸಂಭವಿಸಿದ್ದು, ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 650 ಮಂದಿ ಗಾಯಗೊಂಡಿದ್ದಾರೆ.ಜೆನೆ ಜಿಲ್ಲೆಯಲ್ಲಿ ಒಂಬತ್ತು ಜನರು ಮತ್ತು ಮಾಮುಜು ಜಿಲ್ಲೆಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ, ಒಟ್ಟು ಸಾವಿನ ಸಂಖ್ಯೆ 35 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಪಶ್ಚಿಮ ಸುಲಾವೆಸಿ ಪ್ರಾಂತೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ಮುಖ್ಯಸ್ಥ ಡಾರ್ನೊ ಮಜೀದ್ ತಿಳಿಸಿದ್ದಾರೆ.ಭೂಕಂಪದಿಂದ ನೂರಾರು ಕಟ್ಟಡಗಳಿಗೆ ಭಾರಿ ಹಾನಿಯಾಗಿದೆ. ಪಶ್ಚಿಮ ಸುಲವೇಸಿಯಲ್ಲಿ ಮಧ್ಯಾಹ್ನ 2.28ರ ಸ್ಥಳೀಯ ಸಮಯದಲ್ಲಿ ಅಪ್ಪಳಿಸಿದ ಭೂಕಂಪದ ಕೇಂದ್ರಬಿಂದ ಮಜೇನ್‌ನ ಈಶಾನ್ಯದ 6 ಕಿ.ಮೀ ದೂರದಲ್ಲಿದ್ದು, 10 ಕಿ.ಮೀ ಆಳವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.