ಅಸ್ಸಾಂ ನಲ್ಲಿ 6.4 ತೀವ್ರತೆಯ ಭೂಕಂಪನ
ಗುವಾಹಟಿ, ಏಪ್ರಿಲ್ 28: ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪವಾಗಿದೆ. ಇದೇ ವೇಳೆ ಈಶಾನ್ಯ, ಉತ್ತರ ಬಂಗಾಳದ ಕೆಲವು ಭಾಗಗಳಲ್ಲೂ ತೀವ್ರ ಭೂಕಂಪನವಾದ ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಬೆಳಿಗ್ಗೆ 7:51 ಕ್ಕೆ ಭೂಮಿಯ ಮೇಲ್ಮೈಯಿಂದ 17 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4 ಎಂದು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಸೋನಿತ್‌ಪುರ ಜಿಲ್ಲೆಯಲ್ಲಿತ್ತು. ಎಂದೂ ವರದಿಯಾಗಿದೆ. ರಾಜ್ಯ ರಾಜಧಾನಿ ಗುವಾಹಟಿಯಲ್ಲೂ ಜನರಿಗೆ ಕಂಪನದ ಅನುಭವವಾಗಿದ್ದು, ಕೆಲವು ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿರುವ ವರದಿಯಾಗಿದೆ.