ಅಲ್ಜೀರಿಯನ್ ಕರಾವಳಿಯಲ್ಲಿ ಭೂಕಂಪನ, ಹಾನಿ ವರದಿಯಿಲ್ಲ
ಮಾಸ್ಕೋ, ಮಾರ್ಚ್ 18 : ಅಲ್ಜೀರಿಯಾದ ಉತ್ತರ ಕರಾವಳಿಯಲ್ಲಿ ಗುರುವಾರ 6.0 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.0 ಎಂದು ದಾಖಲಾಗಿರುವುದಾಗಿ ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಬೆಜಿಯಾ ನಗರದ ಈಶಾನ್ಯಕ್ಕೆ 24 ಕಿಲೋಮೀಟರ್ (ಸುಮಾರು 15 ಮೈಲಿ) ದೂರದಲ್ಲಿ ಕಂಪನ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು 10 ಕಿಲೋಮೀಟರ್ ಆಳದಲ್ಲಿತ್ತು.ಆದರೆ ಭೂಕಂಪನದಿಂದ ಯಾವುದೇ ಸಾವಿ ನೋವಿನ ವರದಿಯಾಗಲೇ ಅಥವಾ ಆಸ್ತಿ ಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ. ಮೇಲಾಗಿ ಈವರೆಗೂ ಯಾವುದೇ ಸುನಾಮಿ ಎಚ್ಚರಿಕೆಯನ್ನೂ ಘೋಷಿಸಲಾಗಿಲ್ಲ. ಮೆಡಿಟರೇನಿಯನ್ ಸಮುದ್ರವು ಆಫ್ರಿಕನ್ ಮತ್ತು ಯುರೇಷಿಯನ್ ಫಲಕಗಳ ನಡುವಿನ ಗಡಿಯಾಗಿರುವುದರಿಂದ ಅಲ್ಜೀರಿಯಾ ಭೂಕಂಪನ ಸಕ್ರಿಯ ಪ್ರದೇಶದಲ್ಲಿದೆ.