ಇಮಾಮಸಾಬ ಜಂಗ್ಲಿ ನಿವಾಸದಲ್ಲಿ ಅಭಿನವ ಗವಿ ಶ್ರೀಗಳಿಗೆ ಪೂಜೆ
ಕುಷ್ಟಗಿ 03: ಪಟ್ಟಣದ ರೀಯಲ್ ಎಸ್ಟೇಟ್ ಉದ್ಯಮಿ ಇಮಾಮಸಾಬ ಜಂಗ್ಲಿ ಅವರ ನಿವಾಸದಲ್ಲಿ ರವಿವಾರ ಮಧ್ಯಾಹ್ನ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷೆ ಮೊದೀನ್ ಬೀ ಜಂಗ್ಲಿಸಾಬ ಮುಲ್ಲಾ ಹಾಗೂ ಕುಟುಂಬ ವರ್ಗದವರು ಪಾದ ಪೂಜೆ ಮಾಡಿ ಭಕ್ತಿ ಮೆರಿದ್ದಿದ್ದಾರೆ.
ಈ ಸಂದರ್ಭದಲ್ಲಿ ಶರಣ ಬಸವೇಶ್ವರ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲೆಮಠ, ಅಮರಚಂದ ಜೈನ್, ವೀರಗಂಗಾಧರ ಸ್ವಾಮಿ ಹಿರೇಮಠ, ಬಸೆಟ್ಟೆಪ್ಪ ಶಿಳ್ಳಿನ್, ವಿರೇಶ ಅಂದಾನಯ್ಯ ಹಿರೇಮಠ, ಶರಣಪ್ಪ ಲಿಂಗಶೆಟ್ಟರ್, ಕಾಸಿಂಸಾಬ ಮುಲ್ಲಾ, ಜಂಗ್ಲಿಸಾಬ ಮುಲ್ಲಾ, ವಿರೇಶ ಕರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.