ವಿಧ್ಯುತ್ತ ಸಂಪರ್ಕ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಿ : ಹೆಸ್ಕಾಂ ಅಧ್ಯಕ್ಷ ಖಾದ್ರಿ
Provide electricity connectivity to farmers: HESCOM President Qadri
ಶಿಗ್ಗಾವಿ 14 : ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ 7 ಜಿಲ್ಲೆಗಳ ಎಲ್ಲ ಅಧಿಕಾರಿಗಳಿಗೆ ಬೇಸಿಗೆ ಸಂದರ್ಭದಲ್ಲಿ 7 ತಾಸು ವಿಧ್ಯುತ್ತ ಸಂಪರ್ಕ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಶಿಗ್ಗಾವಿ ತಾಲೂಕ ಹೆಸ್ಕಾಂ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು ಲೈನ್ ಮನಗಳು ಕಾರ್ಯಪ್ರವೃತ್ತರಾದಾಗ ಸೆಪ್ಟಿ ಕಿಟ್ಟ್ ಹಾಕಿ ಕಾರ್ಯನಿರ್ವಹಿಸಬೇಕು, ಅಲ್ಲದೇ ಗ್ರಾಹಕರ ಪೋನ ಬಂದಾಗ ರೀಸೀವ ಮಾಡಬೇಕು ಇಲ್ಲದಿದ್ದರೆ ನನಗೆ ಪೋನ ಬರುತ್ತವೆ ಹಾಗೂ ಎಲ್ಲ ಗ್ರಾಹಕರು ಹಳೆ ಬಿಲ್ಲ ಪಾವತಿಯನ್ನು ಮಾಡಿದಾಗ ಹೆಸ್ಕಾಂ ಇಲಾಖೆಗೆ ಶಕ್ತಿ ಬರುತ್ತದೆ.ಹೆಸ್ಕಾಂ ರೈತರ ಅಹವಾಲನ್ನು ಸ್ವೀಕರಿಸಿ ಅವರ ನ್ಯೂನತೆಗಳನ್ನು ಸರಿಪಡಿಸಬೇಕು ಹಾಗೂ ಅಧಿಕಾರಿಗಳು ಹಾಗೂ ಲೈನ್ ಮನಗಳು ಹಣದ ನೀರೀಕ್ಷೆಯನ್ನು ಮಾಡಿದರೆ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಎ.ಇ.ಇ ಹಾಗೂ ಲೈನ್ ಮನಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 