ಮೂಡಲಗಿ

ತೈಲ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ತೈಲ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ಮೂಡಲಗಿ 15: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ ಹಮ್ಮಿಕೊಂಡಿರುವ ‘100 ನಾಟೌಟ್‌’ ಪ್ರತಿಭಟನೆ ಅಭಿಯಾನ ಕಾರ್ಯಕ್ರಮ ಪಟ್ಟಣದ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಅರಬಾಂವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ತೈಲ ದರ ಹೆಚ್ಚಳ ಖಂಡಿಸಿ ಭಿತ್ತಿಪತ್ರ ಹಿಡಿದು ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. 

ಮುಖಂಡ ಅರವಿಂದ ದಳವಾಯಿ ಮಾತನಾಡಿ, ಕೊರೋನಾ ಲಾಕ್ ಡೌನ ಸಮಯದಲ್ಲಿ ಜನ ಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಪರದಾಡುವಾಗ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದರ ಮಧ್ಯೆ ಗ್ಯಾಸ, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರು ಬದುಕುವುದು ಕಷ್ಟವಾಗಿ ಅವರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ ಇದು ಇಡಿ ದೇಶದ ಸಮಸ್ಯೆಯಾಗಿರುವುದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಮಾತ್ರ ಸರಕಾರಕ್ಕೆ ಬಿಸಿ ತಟ್ಟುತ್ತದೆ. ಕೂಡಲೆ ಕೇಂದ್ರ ಸರಕಾರ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. 

ಹಿರಿಯ ಕಾಂಗ್ರೆಸ ಮುಖಂಡ ಎಸ್ ಆರ್ ಸೋನವಾಲ್ಕರ, ಅರಭಾಂವಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ, ರವಿ ತುಪ್ಪದ, ಮಲೀಕ ಕಳ್ಳಿಮನಿ, ಜಾಕೀರ ನದಾಫ್ ಮಾತನಾಡಿದರು. ಮದಾರಸಾಬ ಜಕಾತಿ ಜೆಡಿಎಸ್ ಪಕ್ಷ ತೊರೆದು ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸಗೆ ಸೇರೆ​‍್ಡಯಾದರು. 

ಹಿರಿಯ ಕಾಂಗ್ರೆಸ ಮುಖಂಡ ಬಸನಗೌಡ ಪಾಟೀಲ, ಶರೀಫ ಪಟೇಲ, ಸುರೇಶ ಮಗದುಮ್, ಯುವ ಘಟಕದ ಅಧ್ಯಕ್ಷ ಇರ್ಶಾದ ಪೈಲವಾನ, ರಮಜಾನ ಬಿಜಾಪೂರ, ಅಭಯ ಹೊಸಮನಿ, ವಿನಯ ಬೊಳಿ, ಮೈನೂದ್ದಿನ ಬಳಿಗಾರ, ಮಲೀಕ ಅತ್ತಾರ, ವಿರುಪಾಕ್ಷ ಮುಗುಳಖೋಡ, ಮಾಳಪ್ಪ ಬಿದರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು. 

  


ಸುದ್ದಿ ಓದಿ