ಮೂಡಲಗಿ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮೂಡಲಗಿ 11: ದೇಶದಲ್ಲಿ 100 ನಾಟ್ಔಟ್ ಶತಕ ಬಾರಿಸಿದ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ ಕಿಸಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಇಜಾಜ ಆಹ್ಮದ ಕೊಟ್ಟಲಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಪೆಟ್ರೋಲ ಬಂಕ್ ಮುಂಬಾಗದಲ್ಲಿ ಕೇಂದ್ರ ಸರಕಾದ ವಿರುದ್ಧ ಘೋಷಣೆ  ಕೂಗಿ ಭಿತ್ತಿ ಪತ್ರ ಪ್ರದರ್ಶನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ದೇಶದಲ್ಲಿ ದಿನೆ ದಿನೆ ದಿನ ಬಳಕೆಯ ಆಹಾರ ಪದಾರ್ಥ ಅಡುಗೆ ಎಣ್ಣೆ ಹಾಗೂ ಅಗತ್ಯ ವಸ್ತುಗಳೊಂದಿಗೆ ಅನಿಲ ಬೆಲೆ ಹೆಚ್ಚಳದಿಂದ ಜನ ರೋಷಿ ಹೋಗಿದ್ದಾರೆ. ಹಿಂದೆಂದೂ ಏರಿಕೆ ಕಂಡಿರದ ಪೆಟ್ರೋಲ್, ಡಿಸೈಲ್ ಬೆಲೆ ಹೆಚ್ಚಳವಾಗಿದೆ. ಒಳ್ಳೆಯ ದಿನಗಳನ್ನು ನೀಡುವ ಭರವಸೆ ನೀಡಿ ಜನಸಾಮಾನ್ಯರ ಹಿತ ಕಾಯುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಮರ್ಿಕ ಘಟಕದ ಉಪಾಧ್ಯಕ್ಷ ಸದ್ದಾಂ ಮಂಟೂರ, ರಫೀಕ ಪೈಲವಾನ, ಅಸ್ಲಂ ಮಕ್ತುಮನವರ, ಶೆಬ್ಬೀರ ಕೆರಿಪಳ್ಳಿ, ಮುಜಾಹಿದ ಶೇಖ, ಇಸಾಕ ಕಲೈಗಾರ, ಅಮೀರ ಬಾಗವಾನ, ಫಾರೂಕ ಅಲಿಗರ, ಅಬ್ಬಾಸ ರಾಮದುರ್ಗ ಇದ್ದರು.

  


ಸುದ್ದಿ ಓದಿ