ಬಳ್ಳಾರಿ

ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಖರೀದಿ ಮಾಡಿ : ಪಿ ರಾಘವೇಂದ್ರ ರೆಡ್ಡಿ ಮನವಿ

ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಖರೀದಿ ಮಾಡಿ : ಪಿ ರಾಘವೇಂದ್ರ ರೆಡ್ಡಿ ಮನವಿ

ಬಳ್ಳಾರಿ. ಅ. 13 :  ರೈತರು ಬೆಳೆದ ಕೃಷಿ ಉತ್ಪನ್ನಗಳ ಬೆಲೆ ಕನಿಷ್ಠ ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಾದಾಗ ಸರ್ಕಾರವೇಮುಂಗಾರು ಮತ್ತು ಹಿಂಗಾರು ಎರಡು ಹಂಗಾಮಿನ  ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಖರೀದಿ ಮಾಡಿ ಮತ್ತುರೈತರಿಗೆ ಬೆಂಬಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಲ್ಲಬೇಕಾದ ಅಗತ್ಯವಿದೆ ಇದರಿಂದ   ದೇಶದ ರೈತರಿಂದ ಆಹಾರ ಉತ್ಪಾದನೆ ಹೆಚ್ಚಿಸಲು ಮತ್ತು ರೈತರಿಗೆ ಆರ್ಥಿಕ ನಷ್ಟ ಉಂಟಾಗದಂತೆ ಆರ್ಥಿಕವಾಗಿ  ರಕ್ಷಣೆ ಮತ್ತು ಭದ್ರತೆ ಒದಗಿಸಲು ಅವರ ಬೆಳೆಯನ್ನು ಪಿಎಂ ಆಶಾ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಪಿ ರಾಘವೇಂದ್ರ ರೆಡ್ಡಿ ತಾಳೂರು ಇವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  

 ಈ ಕುರಿತು ಮಂಗಳವಾರದಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ,  ರಾಜ್ಯದಲ್ಲಿ ಹಿಂದಿನ ಹಲವು ವರ್ಷಗಳಿಂದ ಮತ್ತು 2025 - 26ರಲ್ಲಿ ಜೋಳ, ರಾಗಿ, ಭತ್ತ ಮತ್ತು ಇತರೆ ಬೆಳೆಗಳನ್ನುಕೇಂದ್ರ ಸರ್ಕಾರ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಖರೀದಿ ಮಾಡಿದೆ.ಆದರೆ  ರಾಜ್ಯ  ಸರ್ಕಾರ ಖರೀದಿಯ ಪ್ರಕ್ರಿಯೆಯನ್ನು ಬಹಳ ತಡವಾಗಿ ಆರಂಭಿಸುವುದು ಧಾನ್ಯಗಳನ್ನು ಗೋಣಿಚೀಲಗಳಲ್ಲಿ ತುಂಬಿಸದೆ ಇರುವುದು ಖರೀದಿಸಿದ ಧಾನ್ಯಗಳನ್ನು ಸಮರ​‍್ಕ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಸಾಗಾಟ ವ್ಯವಸ್ಥೆ ಕಲ್ಪಿಸಿದೆ ಇರುವುದು ಖರೀದಿಯ ನಂತರ ರೈತರ ಖಾತೆಗಳಿಗೆ ತಕ್ಷಣವೇ ಹಣ ಜಮೆಮಾಡದೆ ಹಲವಾರು ತಿಂಗಳು ಕಾಯಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರಧಾನ ಮಂತ್ರಿ ಆದಾಯ ಸಂರಕ್ಷಣಾ ಅಭಿಯಾನದ ಯೋಜನೆಯ (ಕಒ-ಂಂಖಊಂ), ಬೆಲೆ ಕೊರತೆ ಪಾವತಿ ಯೋಜನೆ(ಕಆಕಖ) ಅಡಿಯಲ್ಲಿ ಎಣ್ಣೆಬೀಜ ಬೆಳೆಗಳ ಖರೀದಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ತಿದ್ದುಪಡಿ ಮಾಡಿ, ಕನಿಷ್ಠ ಬೆಂಬಲ ಯೋಜನೆಯ ಅಡಿಯಲ್ಲಿಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವ ಕೆಲವು ಕೃಷಿ ಉತ್ಪನ್ನಗಳನ್ನು ( ಉದಾಹರಣೆಗೆ ಜೋಳ, ರಾಗಿ, ಭತ್ತ ಮತ್ತು ಕೃಷಿ ಉತ್ಪನ್ನಗಳು ) ಬೆಲೆ ಕೊರತೆಪಾವತಿ ಯೋಜನೆಗೆ (ಕಆಕಖ) ಸೇರೆ​‍್ಡ ಮಾಡಲು ಸದರಿ ಕಒ-ಂಂಖಊಂ ಯೋಜನೆಯ "ಕಆಕಖ" ಅಡಿಯಲ್ಲಿ ಸೇರೆ​‍್ಡಯಾಗದಿರುವ ಕೃಷಿ ಉತ್ಪನ್ನಗಳನ್ನು ಸೇರೆ​‍್ಡ ಮಾಡಲು  ಪ್ರಧಾನ ಮಂತ್ರಿ, ಕೇಂದ್ರ ಕೃಷಿ ಮಂತ್ರಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿಗಳ ಜೊತೆ ಚರ್ಚಿಸಬೇಕೆಂದು ಪತ್ರದ ಮೂಲಕ  ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. 


ಸುದ್ದಿ ಓದಿ