ಅಂತರರಾಷ್ಟ್ರೀಯ

ನೂತನ ರಾಯಭಾರಿಗಳ ನೇಮಕಕ್ಕೆ ಮುಂದಾದ ಅಧ್ಯಕ್ಷ ಜೋ ಬೈಡೆನ್

ನೂತನ ರಾಯಭಾರಿಗಳ  ನೇಮಕಕ್ಕೆ ಮುಂದಾದ ಅಧ್ಯಕ್ಷ ಜೋ ಬೈಡೆನ್

ವಾಷಿಂಗ್ಟನ್, ಮೇ 31: ಅಮೆರಿಕ  ಅಧ್ಯಕ್ಷ ಜೋ ಬೈಡನ್  ಅವರು ಕ್ಯಾರೋಲಿನ್ ಕೆನಡಿ ಮತ್ತು ವಿಕ್ಕಿ ಕೆನಡಿಯನ್ನು ಅಮೆರಿಕದ  ನೂತನ    ರಾಯಭಾರಿಗಳನ್ನಾಗಿ  ನೇಮಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೊಸ್ ವರದಿ ಮಾಡಿದೆ. 

ಅಮೆರಿಕ ದ ಮಾಜಿ  ಅಧ್ಯಕ್ಷ ಬರಾಕ್ ಒಬಾಮರ ಅವಧಿಯಲ್ಲಿ ಜಪಾನ್  ಎರಡನೇ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಕ್ಯಾರೋಲಿನ್ ಕೆನಡಿಯನ್ನು ಆಸ್ಟ್ರೇಲಿಯಾದಲ್ಲಿನ ಅಮೆರಿಕದ ನೂತನ  ರಾಯಭಾರಿಯಾಗಿ ನೇಮಿಸಲಿದ್ದಾರೆ  ಎಂದು ಆಕ್ಸಿಯೊಸ್ ಭಾನುವಾರ ವರದಿ ಮಾಡಿದೆ. 

ಗ್ರೀನ್‌ಬರ್ಗ್ ಟ್ರೌರಿಗ್‌ನ ವಕೀಲರಾದ  ವಿಕಿ ಕೆನಡಿಯನ್ನು ಪಶ್ಚಿಮ ಯುರೋಪಿನ ರಾಷ್ಟಕ್ಕೆ   ನೇಮಿಸಬಹುದು  ಎಂದೂ  ಆಕ್ಸಿಯೊಸ್ ಹೇಳಿದೆ. 

ಸುದ್ದಿ ಓದಿ