ಬಾಗೇವಾಡಿ ಘಟನೆಯ ಪ್ರತಿಭಟನೆ ನಡೆಸುವ ಕುರಿತು ಪೂರ್ವಭಾವಿ ಸಭೆ

ಬಾಗೇವಾಡಿ  ಘಟನೆಯ ಪ್ರತಿಭಟನೆ ನಡೆಸುವ ಕುರಿತು ಪೂರ್ವಭಾವಿ ಸಭೆ  Preparatory meeting to protest Bagewadi incident

ತಾಳಿಕೋಟಿ 30 :  ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ನಾಗರಬೆಟ್ಟ ಗ್ರಾಮದ ದಲಿತ ಯುವಕ ರವಿಚಂದ್ರ ಮಾದರ ಈತನನ್ನು ಬರ್ಬರವಾಗಿ ಕೊಲೆ ಮಾಡಿದ ಅಮಾನುಷ ಘಟನೆಯನ್ನು ಖಂಡಿಸಿ ಜೂನ್ 1 ರಂದು ನಡೆಸಲಿರುವ ಪ್ರತಿಭಟನಾ ಮೆರವಣಿಗೆ ಕುರಿತು ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ ಮಾತನಾಡಿ ಈ ಅಮಾನುಷ ಹತ್ಯೆಯನ್ನು ಮಾಡಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡುವಂತಾಗಲು ಎಲ್ಲ ದಲಿತ ಸಂಘಟನೆಗಳು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಈ ಕಾರಣಕ್ಕಾಗಿ ಜೂನ್ 1 ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು. 

 ಡಿಎಸ್‌ಎಸ್ (ನಾಗವಾರ ಬಣ) ಬೆಳಗಾಂವಿ ವಿಭಾಗದ ಸಂಚಾಲಕ ದೇವೇಂದ್ರ ಹಾದಿಮನಿ ಮಾತನಾಡಿ ಈ ಬರ್ಬರ ಹತ್ಯೆಯನ್ನು ನಡೆಸಿದ ಕೊಲೆಗೆಡಕರಿಗೆ ಕಠಿಣ ಶಿಕ್ಷೆಯನ್ನು ನೀಡುವುದರ ಜೊತೆಗೆ ನೊಂದ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ ಇದಕ್ಕಾಗಿ ಸರ್ಕಾರದ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ನಡೆಸೋಣ ಎಂದರು. ಡಿ.ಎಸ್‌.ಎಸ್‌.ಅಂಬೇಡ್ಕರ್ ಧ್ವನಿ (ಚಂದ್ರಕಾಂತ್ ಕಾದ್ರೊಳ್ಳಿ ಬಣ)ದ ತಾಲೂಕಾಧ್ಯಕ್ಷ ರಮೇಶ ದೊಡಮನಿ (ಸಾಸನೂರ) ಅವರು ಮಾತನಾಡಿ ಇದೊಂದು ಅತ್ಯಂತ ಅಮಾನವೀಯವಾದ ಕೊಲೆ ಘಟನೆ ಇದನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ಖಂಡಿಸಬೇಕಾಗಿದೆ ಆದ್ದರಿಂದ ಜೂನ್ 1 ರಂದು ನಡೆಯಲಿರುವ ಪ್ರತಿಭಟನೆಗೆ ಪಟ್ಟಣದ ಎಲ್ಲ ಬಾಂಧವರು ಸಹಕಾರ ನೀಡಬೇಕು ಎಂದರು.  

ಅಂಬೇಡ್ಕರ್ ಸೇನೆ ತಾಲೂಕ ಘಟಕದ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ ಕಾರ್ಯಕ್ರಮದ ರೂಪ-ರೇಷೆ ಕುರಿತು ಮಾತನಾಡಿದರು. ಸಭೆಯಲ್ಲಿ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಖಜಾಂಚಿ ಪರಶುರಾಮ ತಳವಾರ, ಗಣ್ಯರಾದ ಯಮನಪ್ಪ ಕಟ್ಟಿಮನಿ, ಹುಲಿಗೆಪ್ಪ ಕಟ್ಟಿಮನಿ, ದ್ಯಾಮಣ್ಣ ಸೋಮನಾಳ, ರಮೇಶ ಮಾದರ, ದೇವಪ್ಪ ತುಂಬಗಿ ಮಾದರ, ಶಂಕ್ರ​‍್ಪ ದೊಡ್ಡಮನಿ, ಅಯ್ಯಪ್ಪ ಸಾಹಸನೂರ, ನಿಂಗಪ್ಪ ಮಾದರ, ಬಸವರಾಜ ಸಾಸನೂರ ಮತ್ತಿ ತರರು ಇದ್ದರು.