ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಕುರಿತು ಪೂರ್ವಭಾವಿ ಸಭೆ
Preparatory meeting for the Silver Jubilee of the Kalidasa Education Committee
ಲೋಕದರ್ಶನ ವರದಿ
ಗದಗ : ನಗರದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ 25 ನೇ ವರ್ಷಾಚರಣೆಯ ಅಂಗವಾಗಿ 25 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಮತ್ತು ವರ್ಷಪೂರ್ತಿಯ ಕಾರ್ಯಕ್ರಮಗಳಿಗೆ ಇದೇ ಜೂ. 7 ರಂದು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ್ರ ಪಾಟೀಲ ಅವರು ಹೇಳಿದರು.
ನಗರದ ದೇವರಾಜ ಅರಸು ಹಾಸ್ಟೆಲ್ ಕಚೇರಿಯಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಕುರಿತು ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಈ ರಜತ ಮಹೋತ್ಸವವನ್ನು ಇನ್ನಷ್ಟು ಉತ್ತಮವಾಗಿ, ಅಭೂತಪೂರ್ವವಾಗಿ ಆಚರಿಸಲು ಜಿಲ್ಲೆಯ ಸಂಗೀತ, ಸಾಂಸ್ಕೃತಿಕ, ಕಲೆ ಸೇರಿದಂತೆ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಸಾಧಕರನ್ನು ಗುರುತಿಸಿ ಗೌರವಿಸಬೇಕು. ಜಿಲ್ಲೆಯ ನಿರುದ್ಯೋಗ ಯುವಕ/ಯುವತಿಯರಿಗೆ ಕೌಶಲ್ಯಾಭಿವೃದ್ದಿ ಕುರಿತು ವಿಶೇಷ ಕಾರ್ಯಕ್ರಮ ಮತ್ತು ಕೆರಿಯರ್ ಗೈಡೆನ್ಸ್ ಕುರಿತು ಕಾರ್ಯಕ್ರಮ ಆಯೋಜಿಸಿ ಮಾರ್ಗದರ್ಶನ ನೀಡಿದರೆ ಜಿಲ್ಲೆಯ ನಿರುದ್ಯೋಗಿಗಳು ಸ್ವಾವಲಂಬಿಯಾಗಿ ಬದುಕುತ್ತಾರೆ. ಮತ್ತು ಮಕ್ಕಳಿಗಾಗಿ ವಿಶೇಷ ಕ್ರೀಡೆಗಳು ಅಂದರೆ ಬಾಡ್ಮಿಂಟನ್ ಮತ್ತು ಸ್ಕೇಟಿಂಗ್ ನಂತಹ ಕ್ರೀಡೆಗಳನ್ನು ಆಯೋಜಿಸಿದರೆ ಉತ್ತಮವಾಗುತ್ತದೆ ಎಂದು ಹೇಳಿದರು.
ಇನ್ನೂ ಆರೋಗ್ಯ ಶಿಬಿರ ಹಮ್ಮಿಕೊಳ್ಳುವದಾದರೆ ನಮ್ಮ ಆರ್‌ಎಂಎಸ್ ಸಂಸ್ಥೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಮತ್ತು ಪರಿಸರ ದಿನಾಚರಣೆಯ ಅಂಗವಾಗಿ ಬರಿ ಸಸಿ ನೆಡುವದನ್ನು ಬಿಟ್ಟು ಮುಂದಿನ ಭವಿಷ್ಯದ ದಿನಗಳ ಬಗ್ಗೆ ಯೋಚಿಸಿ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಡಿವೈಡರ್ ಸುತ್ತಮುತ್ತ ಸಸಿಗಳನ್ನು ನೆಟ್ಟು ಅವುಗಳನ್ನು ನಿರಂತರ ಪೋಷಣೆ ಮಾಡಲು ಕಾರ್ಮಿಕರನ್ನು ನಿಯೋಜಿಸಿ ವ್ಯವಸ್ಥಿತವಾಗಿ ಪರಿಸರ ರಕ್ಷಣೆ ಮಾಡಿದರೆ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ಹೆಸರು ಜನಮನದಲ್ಲಿ ಶಾಶ್ವತವಾಗಿರುತ್ತದೆ ಎಂದು ಕೃಷ್ಣಗೌಡ್ರ ಪಾಟೀಲ ಅವರು ಸಲಹೆ ನೀಡಿದರು.
ನಿವೃತ್ತ ನ್ಯಾಯಮೂರ್ತಿ ಎಸ್.ಜಿ. ಪಲ್ಲೇದ ಅವರು ಮಾತನಾಡಿ, ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಕೊಪ್ಪಳದ ಶ್ರೀಗಳಿಗೆ ಆಶೀರ್ವಚನಕ್ಕೆ ಹೆಚ್ಚು ಸಮಯ ನೀಡಿ ಅವರಿಂದ ಹಿತೋಪದೇಶ ಪಡೆಯೋಣ ಎಂದು ಹೇಳಿದರು. ಆರ್.ಡಿ. ಕಡ್ಲಿಕೊಪ್ಪ ಅವರು ಮಾತನಾಡಿ, ಪರಿಸರ ದಿನಾಚರಣೆಯ ಅಂಗವಾಗಿ ಈ ಪ್ರದೇಶದ ಮನೆಮನೆಗಳಿಗೆ ಸಸಿಗಳನ್ನು ನೀಡಿ ಅವುಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆವಹಿಸಿದ್ದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರ್ಪ ಹೆಬಸೂರ ಅವರು ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ಆರೋಗ್ಯಶಿಬಿರ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಪರಿಸರ ದಿನಾಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಲ್ಲರೂ ಸೇರಿಕೊಂಡು ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವವನ್ನು ಅವಿಸ್ಮರಣೀಯವನ್ನಾಗಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಯಲು ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ.ಮ್ಯಾಗೇರಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಬಿ.ಬಿ.ಬಾವಿಕಟ್ಟಿ, ಯಲ್ಲಪ್ಪ ಗುರಿಕಾರ, ಶಶಿಧರ ರೊಳ್ಳಿ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಭೆಯಲ್ಲಿ ನಾಗಪ್ಪ ಗುಗ್ಗರಿ, ಆರ್.ಎಂ. ನಿಂಬನಾಯ್ಕರ, ಎಸ್.ಡಿ.ಸಿಂಗಟಾಲಕೇರಿ, ಎಸ್.ಎಸ್. ಮುದಿಯಜ್ಜನವರ, ಆರ್.ಎಸ್. ಕುರಿಯವರ, ಮೋಹನ ಇಮರಾಪೂರ, ಹನುಮಂತಪ್ಪ ಗೊಜನೂರ, ಎಚ್.ಬಿ.ಪೋತಿ, ಬಿ.ಎಚ್. ಹ್ಯಾಟಿ, ಎಸ್.ಎಸ್.ಕರಡಿ, ಡಿ.ವೈ. ವಡಗೇರಿ, ಎ.ಬಿ.ಹುಗ್ಗೆಣ್ಣವರ, ವಿ.ಸಿ.ಚವಡಿಶೆಟ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವೈ.ಬಿ.ಬಾನಾಪೂರ ಸ್ವಾಗತಿಸಿದರು. ನೀಲಕಂಠ ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ.ಕಂಬಳಿ ವಂದಿಸಿದರು.
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ 