ಎಸ್ಎಸ್ಎಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ: ರಾಜೀವ ನಾಯಕ ಮೆಚ್ಚುಗೆ
ಲೋಕದರ್ಶನ ವರದಿ
ಮೂಡಲಗಿ 22: ಪ್ರಸಕ್ತ ಸಾಲಿನ 2022ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡಲಗಿ ವಲಯದಲ್ಲಿ 7041 ಪರೀಕ್ಷೆ ಎದುರಿಸುತ್ತಿದ್ದು, ರಾಜ್ಯದಲ್ಲಿಯೇ ವಿನೂತನ ಕಾರ್ಯಚಟುವಟಿಕೆಗಳಿಂದ ಹೆಸರುವಾಸಿಯಾಗಿರುವದು ಸಂತಸದ ವಿಷಯವಾಗಿದೆ ಎಂದು ಬೆಳಗಾವಿ ಸಿಟಿಇ ಪ್ರಾಚಾರ್ಯರು ಹಾಗೂ ಸಹ ನಿರ್ದೇಶಕ ರಾಜೀವ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ 81 ಪ್ರೌಢ ಶಾಲೆಗಳ ಮೇಲ್ವಿಚಾರಣೆ ಹಾಗೂ 26 ಪರೀಕ್ಷಾ ಕೇಂದ್ರಗಳ ತಯಾರಿ ಕುರಿತು ಮಾತನಾಡಿ, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾಗಿ ತೊಂದರೆಯಾಗದ ನಿಟ್ಟಿನಲ್ಲಿ ಪೂರ್ವ ತಯಾರಿ ಮೆಚ್ಚುವಂತಹದು. ಗೂಗಲ್ ಮೀಟ್, ಟೇಲಿ ಗ್ರಾಂ ಸಂವಹನದ ಮೂಲಕ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಮಾಡಿ ಕುಂದು ಕೊರತೆ ಆಲಿಸಿದಾಗ ವಲಯದಲ್ಲಿನ ಸೂಕ್ಷ್ಮಾತಿ ಮಾಹಿತಿಗಳು ಲಭ್ಯವಾದವು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ಕೊಠಡಿ ಮೇಲ್ವಿಚಾರಕರ ಮಾಹಿತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಬಿಇಇಒ ಅಜಿತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿಬಳಗಾಳ, ಎಸ್.ಎಸ್.ಎಲ್.ಸಿ ತಾಲೂಕಾ ನೋಡಲ್ ಅಧಿಕಾರಿ ಸತೀಶ್.ಬಿ,.ಎಸ್, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ವರ್ಗದವರು ಹಾಜರಿದ್ದರು.