ಜಗಜೀವನ್ ರಾಮ, ಅಂಬೇಡ್ಕರ್ ಕುರಿತು ಪೂರ್ವಭಾವಿ ಸಭೆ
ಹುಕ್ಕೇರಿ, 24 : ತಾಲೂಕ್ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಲಾದ ಡಾ,ಬಾಬು ಜಗಜಿವನ ರಾಮ ಮತ್ತು ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ರವರ ಜನ್ಮ ದಿನ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ತಾಲೂಕಾ ಮಟ್ಟದ ಕೇಲ ಅನುಷ್ಟಾನ ಅಧಿಕಾರಿಗಳು ಗೈರ ಹಾಜರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ದಲಿತ ಮುಖಂಡರು ಅಧಿಕಾರಿಗಳ ಪರವಾಗಿ ಸಭೆಗೆ ಬಂದ ಸಿಬ್ಬಂದಿಯನ್ನು ಸಭೆಯಿಂದ ಹೋರ ಹಾಕುವಂತೆ ಆಗ್ರಹಿಸಿದಾಗ ತಹಸಿಲ್ದಾರ ಬಲರಾಮ ಕಟ್ಟಿಮನಿ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದರು.
ಜಿಲ್ಲಾಧಿಕಾರಿಗಳಿಗೆ ಪ್ರೋಡಿಸಿಂಗ ಮೂಲಕ ತಿಳಿಸಲಾಗುವದು ಹಾಗೂ ಅನುಷ್ಟಾನ ಅಧಿಕಾರಿಗಳ ಪರವಾಗಿ ಬಂದ ಸಿಬ್ಬಂದಿಯನ್ನು ಸಭೆಯಿಂದ ಹೋರ ಹೋಗುವಂತೆ ಆದೇಶಿಸಿದರು,ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಸಭೆಯಿಂದ ಹೋರ ನಡೆದರು. ಬಂದಿರುವಂತಹ ಅಧಿಕಾರಿಗಳಿಂದ ಡಾ, ಬಾಬು ಜಗಜೀವನ ರಾಮ ಮತ್ತು ಡಾ, ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಭೆ ಆರಂಭಿಸಿದರು.
ತಾಲೂಕಾ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆ ಮೇಲೆ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಗ್ಯಾರಂಟಿ ಅನುಷ್ಟಾನ ಅದ್ಯಕ್ಷ ಶಾನೂಲ ತಹಸಿಲ್ದಾರ, ವಿಭಾಗಿಯ ಅಧಿಕಾರೇತರ ಸದಸ್ಯ ರಮೇಶ ಹುಂಜಿ, ಉದಯ ಹುಕ್ಕೇರಿ, ಪುರಸಭೆ ಮುಖ್ಯಾಧಿಕಾರಿಗಳಾದ ಈಶ್ವರ ಸಿದ್ದಾಳ, ಪ್ರಕಾಶ ಮಠದ, ಮಹೇಶ ಬಜಂತ್ರಿ, ಪ್ರವೀಣ ಮಾಡ್ಯಾಳ, ಬಿ ಎಲ್ ಸನದಿ, ಸವಿತಾ ಹಲಕಿ ಭಾರತಿ ನಂದಿಹಳ್ಳಿ ತಾಲೂಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಭೆಯಲ್ಲಿ ದಲಿತ ಮುಖಂಡರು ಕಾರ್ಯಕ್ರಮದ ರೂಪ ರೇಷೆಗಳು ಒಳಗೊಂಡಂತೆ ತತ್ವ ಆದರ್ಶವನ್ನು ಪರಿಪಾಲಿಸಬೇಕೆಂದು ಸಲಹೆ ಸೂಚನೆ ನೀಡಿದರೂ