ಜಾನುವಾರುಗಳಿಗೆ ಕುಡಿಯಲು ನೀರು ಕಾಲುವೆಗೆ ಹರಿಸಿ: ಸೋಮು ಬಿರಾದಾರ

ಜಾನುವಾರುಗಳಿಗೆ ಕುಡಿಯಲು ನೀರು ಕಾಲುವೆಗೆ ಹರಿಸಿ: ಸೋಮು ಬಿರಾದಾರ  Pour water into the canal for cattle to drink: Somu Biradaar

ಕೊಲ್ಹಾರ 20: ಮುಳವಾಡ ಏತ ನೀರಾವರಿ ಸ್ಕೀಮ್ 1 ಮತ್ತು 2 ಪ್ರಾರಂಭಿಸಿ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ಮಟ್ಟಿಹಾಳ ಕ್ರಾಸ್ ಹತ್ತಿರದ ಕೃಷ್ಣ ಭಾಗ್ಯ ಜಲನಿಗಮದ ಅಧಿಕಾರಿಗಳಿಗೆ ಮನವಿಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ ರೈತರ ಜಮೀನುಗಳಲ್ಲಿ ನೀರಿನ ಅಭಾವವಿದ್ದು ಜನಜಾನುವಾರುಗಳಿಗೆ ನೀರಿನ ಸಮಸ್ಯೆ ಆಗುತ್ತಿದೆ ಮತ್ತು ಅಂತರ್ಜಲ ಕುಸಿಯುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಬಲೇಶ್ವರ, ಕೊಲ್ಹಾರ ತಾಲ್ಲೂಕಿನ ರೈತರ ಜಮೀನುಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿನ ಅಭಾವವಾಗಿರುವುದರಿಂದ ಈಗಾಗಲೇ ಆಲಮಟ್ಟಿ ಅಣೆಕಟ್ಟೆಯ ಸಾಕಷ್ಟು ನೀರು ಸಂಗ್ರಹವಿದ್ದು ಕಾರಣ ತಾವುಗಳು ನೀರಿನ ಸಮರ​‍್ಕ ಬಳಕೆಗಾಗಿ ರೈತರ ಜಮೀನುಗಳಿಗೆ ಮತ್ತು ಜನಜಾನುವಾರಗಳಿಗೆ ನೀರಿನ ಹೆಚ್ಚಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಮುಳವಾಡ ಏತನೀರಾವರಿಯ ಹಂತ 1 ಮತ್ತು 2 ನೀರು ಹರಿಸಿ ಕೆರೆ,ಹಳ್ಳಕೊಳ್ಳಗಳನ್ನು ತುಂಬಿಸುವ ಮುಲಕ ರೈತರಿಗೆ ಹಾಗೂ ಮೇವಿನ ಸಲುವಾಗಿ ಜನಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.  ಕೆಬಿಜೆಎನ್‌ಎಲ್ ಅಧಿಕಾರಿ ಗೋವಿಂದ ರಾಠೋಡ, ತಹಸಿಲ್ದಾರ್ ಸಂತೋಷ್ ಮ್ಯಾಗೇರಿ, ಕೊಲ್ಹಾರ, ಪಿಎಸ್‌ಐ ಅಶೋಕ್ ನಾಯಕ್ ರೈತ ಮುಖಂಡರು ನೂರಾರು ರೈತರು ಇದ್ದರು.