ಬೆಂಗಳೂರಿನ ಪಂಚಮಸಾಲಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಚರ್ಚೆ : ಗೋಕಾಕದಿಂದ ಲಕ್ಷ್ಮೀ ಹೆಬ್ಬಾಳಕರ್ ಕಣಕ್ಕೆ ಇಳಿಸುವ ಬಗ್ಗೆ ಪ್ರಸ್ತಾಪ
ಬೆಳಗಾವಿ : ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಚರ್ಚೆ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ಹಾಗೂ ಗೋಕಾಕ ಕ್ಷೇತ್ರದ ಮುಖಂಡರು ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳನ್ನು ಭೇಟಿಯಾಗಿ ಗೋಕಾಕ ಕ್ಷೇತ್ರದ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ನಿಲ್ಲಿಸುವ ಕುರಿತು ಪ್ರಸ್ತಾಪ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಕೆಲ ಪಂಚಮಸಾಲಿ ಮುಖಂಡರು ಜಯಮೃತ್ಯುಂಜಯ ಶ್ರಿಗಳ ಭೇಟಿ ಮಾಡಿ ಗೋಕಾಕ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಆಗ್ರಹ ಪಡಿಸಿದ್ದಾರೆ.
ಈ ವೇಳೆಯ ಪಂಚಮಸಾಲಿ ಹೋರಾದ ಸ್ಥಳದಲ್ಲಿ ಗೋಕಾಕ್ ಜೆಡಿಎಸ್ ಮುಖಂಡ ಚಂದರನ ಗಿಡ್ಡಣ್ಣವರ್ ಅವರು ಭಾಷಣ ಮಾಡಿ ಗೋಕಾಕ ಕ್ಷೇತ್ರದಲ್ಲಿ ಅನೇಕ ಚುನಾವಣೆಯ ಆಕಾಂಕ್ಷಿಗಳು ಸ್ಪರ್ಧಿಸಲು ಪೈಪೋಟಿ ಇದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕಳನ್ನು ಗೋಕಾಕ ಕ್ಷೇತ್ರಕ್ಕೆ ತಂದು ಚುನಾವಣೆಗೆ ನಿಲ್ಲಿಸೊಣ. ನಿಮ್ಮ ಪಾದಕ್ಕೆ ಈ ಮನವಿಯನ್ನು ಅರ್ಪಣೆ ಮಾಡುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದರೆ ಎಲ್ಲರೂ ಸೇರಿ ಚುನಾವಣೆ ಮಾಡುತ್ತೇವೆ. ಈ ಪ್ರಸ್ತಾವನೆಯನ್ನು ನೀವೆ ನಿರ್ಧರಿಸಬೇಕು ಎಂದು ಕೂಡಲಸಂಗಮ ಶ್ರೀಗಳ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹೆಣ್ಣುಮಗಳೆ ಸೋಲಿಸ ಉದಾಹಣೆ ಇದೆ.
ದುಷ್ಟ ಸಾಮ್ರಾಜ್ಯಕ್ಕೆ ಬೆಳಗಾವಿಯ ಚನ್ನಮ್ಮಳೇ ಸೋಲಿಸಲು ಎನ್ನುವುದು ನಮ್ಮ ಬಯಕೆ ಎಂದು ಹೇಳುವ ಮೂಲಕ ಗೋಕಾಕ ಕ್ಷೇತ್ರವನ್ನು ಭ್ರಷ್ಟ ಸಾಮ್ರಾಜ್ಯಕ್ಕೆ ಹೋಲಿಕೆ ಮಾಡಿದ್ದಾರೆ. ಗೋಕಾಕ್, ಮೂಡಲಗಿ ಪಂಚಮಸಾಲಿ ಬಂಧುಗಳು ನಾನು ಹೇಳಿದ್ದು ಸರಿ ಇದ್ದರೆ ಈ ಕಾರ್ಯಕ್ಕೆ ಶ್ರೀಗಳು ಅಣಿಯಾಗಬೇಕು ಎಂದು ಮನವಿ ಮಾಡುತ್ತೇನೆ. ಈಗ ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ. ಅನೇಕರು ಪಂಚಮಸಾಲಿ ರಾಜಕೀಯ ಪಕ್ಷಬೇಕು ಎನ್ನುತ್ತಿದ್ದಾರೆ.
ಅದು ಆಗುತ್ತೋ ಇಲ್ಲೊ ಗೊತ್ತಿಲ್ಲ ನಮ್ಮ ಹೋರಾಟಕ್ಕೆ ಬೆಂಬಲಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದವರನ್ನು ಸೋಲಿಸುವ ಕಾರ್ಯವು ಆಗಬೇಕು. ನಮ್ಮನ್ನು ಹಗರುವಾಗಿ ಯಾರು ತೆಗೆದುಕೊಳ್ಳಬಾರದು. ಕೆಟ್ಟ ಬುದ್ದಿಗೆ ಪಾಠ ಕಲಿಸಬೇಕು ಎನ್ನುವು ನನ್ನ ವೈಯಕ್ತಿಕ ಅಭಿಪ್ರಾಯ. ಮೂಡಲಗಿ, ಗೋಕಾಕ ವ್ಯಾಪ್ತಿಯವರು ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲಿದೆ ಎಂದು ಹೇಳಿದ್ದಾರೆ.