ಮುಂಡರಗಿ

ಪೊಲೀಸ್ ಸಿಬ್ಬಂದಿ ಲಾಠಿ ಪ್ರಹಾರ:ಮಹಿಳೆಯ ಕೈಗೆ ಪೆಟ್ಟು

ಪೊಲೀಸ್ ಸಿಬ್ಬಂದಿ ಲಾಠಿ ಪ್ರಹಾರ:ಮಹಿಳೆಯ ಕೈಗೆ ಪೆಟ್ಟು

ಮುಂಡರಗಿ :ಮತದಾನ ಮಾಡಲು ಬಂದಿರುವ ಮಹಿಳೆಗೆ ಪೊಲೀಸ್ ಸಿಬ್ಬಂದಿ ಲಾಟಿಯಿಂದ ಹೊಡೆದು ಮಹಿಳೆಯ ಕೈಗೆ ಪೆಟ್ಟು ಬಿದ್ದಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರಕ್ಕೆ ಒಳಪಡುವ ಮುಂಡರಗಿ ತಾಲೂಕಿನ ಶಿರನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 216 ರಲ್ಲಿ ನಡೆಯಿತು. 

ತಾಲೂಕಿನ ಶಿರನಹಳ್ಳಿ ಗ್ರಾಮದಲ್ಲಿ ಪ್ರತಿ ಸಲವೂ ಯಾವುದೇ ಹಂತದ ಮತದಾನ ನಡೆದರೂ ಶಾಂತಿಯುತ ಮತದಾನ ನಡೆಯುತ್ತದೆ. ಆದರೆ ಈ ಭಾರಿ ನಮ್ಮ ಗ್ರಾಮಕ್ಕೆ ಮತಗಟ್ಟೆಯನ್ನು ವೀಕ್ಷಣೆಗೆ ಬಂದ ಪೊಲೀಸ್ ಸಿಬ್ಬಂದಿಯು ಏಕಾ ಏಕಿ ಒಬ್ಬ ಮಹಿಳೆಯ ಮೇಲೆ ಲಾಟಿ ಬೀಸಿ ಮಹಿಳೆಯ ಕೈಗೆ ಪೆಟ್ಟು ಬಿದ್ದಿರುವುದನ್ನು ನೋಡಿ ಪೋಲಿಸ್ ಸಿಬ್ಬಂದಿಯು ಪರಾರಿಯಾದರು ಎಂದು ಆರೋಪಿಸಿದರು. 

ಅಧಿಕಾರಿಗಳು ಇಲ್ಲಿಯ ಮತದಾರರು ಏನಾದರೂ ಗೊಂದಲ ಅಥವಾ ಗಲಾಟೆ ಮಾಡಿದರೆ ಅವರಿಗೆ ತಿಳುವಳಿಕೆ ಹೇಳಿ ಶಾಂತಿಯುತ ಮತದಾನಕ್ಕೆ ಜಾಗೃತಿ ನೀಡಬೇಕು. ಅದನ್ನು ಬಿಟ್ಟು ಲಾಟಿ ಬೀಸುವದು ಸರಿಯಲ್ಲ ಎಂಬ ಆಕ್ರೋಶ ಸ್ಥಳೀಯ ಮತದಾರರಿಂದ ಕಂಡುಬಂತು. ಈ ಕುರಿತು ಸ್ಥಳೀಯ ಮತದಾರರೆಲ್ಲರೂ ಚುನವಣಾಧಿಕಾರಿಗಳು ಹಾಗೂ ತಹಶಿಲ್ದಾರರು ಈ ಗ್ರಾಮಕ್ಕೆ ಬೇಟಿ ನೀಡಿ, ಘಟನೆಗೆ ಕಾರಣಿಕರ್ತರಾದವರನ್ನು ಕರೆತಂದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೂ ಮತದಾನಕ್ಕೆ ಅವಕಾಶ ನೀಡುವುದರಿಲ್ಲವೆಂದು ಪಟ್ಟು ಹಿಡಿದ ಕಾರಣ, ಸುಮಾರು 45 ನಿಮಿಷ ಮತದಾನವನ್ನು ಬಂದ್ ಮಾಡಲಾಗಿತ್ತು. 

ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ ಶೃತಿ ಮಳ್ಳಪ್ಪಗೌಡರ, ಈ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಪರೀಶೀಲಿಸಿ, ಅಂತಹ ಸಿಬ್ಬಂದಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೂ ಲಾಟಿ ಹೊಡೆತಕ್ಕೆ ಒಳಗಾದ ಮಹಿಳೆಗೆ ಸೂಕ್ತವಾದ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಇನ್ನು ಮುಂದೆ ಯಾರೂ ಗಲಾಟೆ ಮಾಡಬಾರದು ಶಾಂತಿಯುತ ಮತದಾನ ಮಾಡುವಂತೆ ಸಹಕರಿಸಬೇಕು ಎಂದರು. ಹಾಗೂ ಸುಮಾರು 45 ಘಂಟೆಗಳ ಕಾಲ ಮತದಾನವನ್ನು ಬಂದ್ ಮಾಡಿದಕ್ಕೆ ಪ್ರತಿಕ್ರೀಯಿಸಿದ ತಹಶಿಲ್ದಾರರು, ಮತದಾನ ಮಾಡಲು ಬೆಳಿಗ್ಗೆ 7 ರಿಂದ ಸಾಯಂಕಾಲ 6 ರವರೆಗೆ ಕಾಲಾವಕವಿದ್ದು. ಅದರೊಳಗೆ ಸಂಪೂರ್ಣ ಮತದಾನ ಆಗದಿದ್ದರೆ, ಕೊನೆ ಹಂತದಲ್ಲಿ ಮತಗಟ್ಟೆಗೆ ಬಂದಿರುವ ಮತದಾರರಿಗೆ ಟೋಕನ್ ನೀಡುವ ಮೂಲಕ ಅವರಿಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುವುದು ಎಂದು ಹೇಳಿದರು. 


ಸುದ್ದಿ ಓದಿ