ಮೊಗಾಡಿಶು ಆತ್ಮಾಹುತಿ ಬಾಂಬ್ ದಾಳಿಗೆ ಪೊಲೀಸ್ ಆಧಿಕಾರಿಗಳ ಬಲಿ
ಮೊಗಾಡಿಶು, ಮೇ 10: ಮೊಗಾಡಿಶು ವಾಬೆರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಆತ್ಮಾಹುತಿ ಬಾಂಬ್ದಾಳಿಕೋರ ಸ್ಫೋಟಿಸಿದ ಬಾಂಬ್ ಗೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇತರೆ 6 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ. ಮೃತಪಟ್ಟವರಲ್ಲಿ ವಾಬೆರಿ ಜಿಲ್ಲಾ ಪೊಲೀಸ್ ಕಮಾಂಡರ್ ಅಹ್ಮದ್ ಬಶಾನೆ ಮತ್ತು ವಾಲಿಯೊವ್ ಆಡ್ಡೆ ಪೊಲೀಸ್ ವಿಭಾಗದ ಉಪ ಕಮಾಂಡರ್ ಅಬ್ಡಿ ಬಸಿದ್ ಕೂಡ ಸೇರಿದ್ದಾರೆ ಎಂದು ಸೊಮಾಲಿ ಪೊಲೀಸ್ ವಕ್ತಾರ ಸಾದಿಕ್ ಅಡೆನ್ ಅಲಿ ಹೇಳಿದ್ದಾರೆ.
ಸ್ಫೋಟದ ತೀವ್ರತೆ ಬಹಳವಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಮತ್ತು ದಾಳಿಯ ಸಮಯದಲ್ಲಿ ಸ್ಥಳದ ಸುತ್ತಲೂ ಅನೇಕ ನಾಗರಿಕರು ಹಾಜರಿದ್ದರು ಎನ್ನಲಾಗಿದೆ.
ಸದ್ಯ ಮತ್ತು ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಮೀನ್ ಆಂಬ್ಯುಲೆನ್ಸ್ ನಿರ್ದೇಶಕ ಅಬ್ಡಿಕಾದೀರ್ ಅಬ್ದುರ್ರಹ್ಮಾನ್ ಹಾಜಿ ಅಡೆನ್ ಫೋನ್ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸ್ಫೋಟದಿಂದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮನೆ ಮಾಡಿದೆ.