ಕಳ್ಳತನವಾಗಿದ್ದ 2.62 ಕೋಟಿ ರೂ ಮೌಲ್ಯದ ಸತ್ತು ಮಾಲೀಕರಿಗೆ ಹಸ್ತಾಂತರಿಸಿದ ಪೊಲೀಸ್ ಇಲಾಖೆ
Police department hands over stolen cash worth Rs 2.62 crore to its owner
ಬಳ್ಳಾರಿ 31: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಆರು ತಿಂಗಳಲ್ಲಿ ದಾಖಲಾದ ಕಳ್ ಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ರೂ.2.62 ಕೋಟಿ ಮೌಲ್ಯದ ಸ್ವತ್ತನ್ನು ನಿನ್ನೆ ಎಸ್ಪಿ ಕಚೇರಿ ಆವರಣದಲ್ಲಿ ಐಜಿಪಿ ಡಾ.ಹರ್ಷ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಮತ್ತವರ ಸಿಬ್ಬಂದಿ ಮಾಲೀಕರಿಗೆ ವಿತರಿಸಿದರು.ಕಳೆದ 2025ರ ಅ.1ರಿಂದ 2026ರ ಮೇ 27ರವರೆಗೆ 294 ಕಳ್ಳತನ ಪ್ರಕರಣ ದಾಖಲಾಗಿ, ?5,80,73,923 ಮೌಲ್ಯದ ಸ್ವತ್ತು ಕಳುವಾಗಿತ್ತು ಪ್ರಕರಣಗಳನ್ನು ಭೇದಿಸಲು ಎರಡು ತಿಂಗಳಿಂದ ವಿಶೇಷ ಕಾಳಜಿ ವಹಿಸಿ ತನಿಖೆಗಾಗಿ ತಂಡಗಳನ್ನು ರಚಿಸಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸಿ 66 ಪ್ರಕರಣಗಳನ್ನು ಪತ್ತೆ ಹಚ್ಚಿ. ನಗದು ಹಣ, ಚಿನ್ನ, ಬೆಳ್ಳಿ, ಬೈಕ್ ರ್ಮದಲಾದವು ಸೇರಿ 2.62,45,351 ರೂ ಮಾಲು ವಶಪಡಿಸಿಕೊಂಡು ಶೇ.45 ರಷ್ಟು ಪ್ರಕರಣಗಳನ್ನು ಬೇಧಿಸಲಾಗಿದೆ.
ಇದರಲ್ಲಿ ಚೀಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಪ್ರಕರಣದಲ್ಲಿ 1.45ಕೋಟಿ ಸ್ವತ್ತು ವಶಕ್ಕೆ ಪಡೆದಿರುವುದು ವಿಶೇಷವಾಗಿದೆ. ಹಗಲು ಕಳ್ಳತನಕ್ಕೆ ಸಂಬಂಧಿಸಿದಂತೆ 13 ಪ್ರಕರಣ ದಾಖಲಾಗಿದ್ದು, 4 ಪ್ರಕರಣ ಪತ್ತೆಯಾಗಿದೆ. 28,54,600 ರೂ ಸತ್ತು ಕಳುವಾಗಿದೆ. ಇದರಲ್ಲಿ 4,68,301 ರೂ ವಶಪಡಿಸಿಕೊಂಡಿದೆ. ರಾತ್ರಿ ಕಳ್ಳತನಕ್ಕೆ ಸಂಬಂಧಿಸಿದಂತೆ 57 ಪ್ರಕರಣದಲ್ಲಿ 1,31,17,400 ಕಳುವಾಗಿದ್ದು, ಇದರಲ್ಲಿ ಪತ್ತೆಯಾಗಿದ್ದು 13,43,600. ಮನೆ ಕಳ್ಳತನ 16 ಪ್ರಕರಣ ದಾಖಲಾಗಿದ್ದು, 3 ಪ್ರಕರಣದಲ್ಲಿ ಪತ್ತೆ ಹಚ್ಚಲಾಗಿದೆ. 13.97,500 ರೂ ವಶಪಡಿಸಿಕೊಂಡಿದೆ. ಸಾಮಾನ್ಯ ಕಳ್ಳತನ 189 ದಾಖಲಾಗಿದ್ದು, 3,31,39,523 ಕಳುವಾಗಿದೆ. 51 ಪ್ರಕರಣ ಪತ್ತೆ ಹಚ್ಚಿ 2,30,35,950 ವಶಪಡಿಸಿ ಕೊಂಡಿದೆ. ಎಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿಗಳು, ಸಿಪಿಐ , ಪಿಎಸ್‌ಐಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 