ಇಂಡಿ ಉಪನೋಂದಣಾಧಿಕಾರಿ ಅಮಾನತಿಗೆ ಆಗ್ರಹಿಸಿ ಮನವಿ

ಇಂಡಿ ಉಪನೋಂದಣಾಧಿಕಾರಿ ಅಮಾನತಿಗೆ ಆಗ್ರಹಿಸಿ ಮನವಿ Petition seeking suspension of Indi Sub-Registrar

ಇಂಡಿ 25 : ನಗರದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಪ್ರತಿದಿನ ಬ್ರಷ್ಟಾಚಾರ ತಾಂಡವಾಡುತ್ತಿದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಖರೀದಿ ಸಮಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಉಪ ನೋಂದಣಾಧಿಕಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಕೂಡಲೆ ಈ ಅಧಿಕಾರಿಯನ್ನು ಅಮಾನತ್ತು ಮಾಡಿ ಅವರು ಬಂದ ದಿನದಿಂದ ಇಲ್ಲಿಯವರೆಗೂ ಮಾಡಿದ ಎಲ್ಲ ದಾಖಲೆಗಳನ್ನು ಪರೀಶೀಲಿಸಿ ಸರಕಾರಕ್ಕೆ ನಷ್ಟ ಮಾಡಿದ ಹಣವನ್ನು ಅವರ ಕೈಯಿಂದಲೇ ಭರಣಾ ಮಾಡಿಸುವಂತೆ ಒತ್ತಾಯಿಸಿ ಕರವೇ ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಸೋಮವಾರ ಕಂದಾಯ ಉಪವಿಭಾಗಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಕಚೇರಿಯಲ್ಲಿ ಏಜೆಂಟ್ ಮೂಲಕ ಹಣ ನೀರಾವರಿ ಜಮೀನಿಗೆ ಒಣ ಬೇಸಾಯ ಮಾಡಿ ಸರ್ಕಾರದ ಖಜಾನೆಗೆ ಬರತಕ್ಕಂತಹ ಆದಾಯಕ್ಕೆ ಮೋಸ ಮಾಡಿ ಅಧಿಕಾರಿ ತನ್ನ ಸ್ವಂತಕ್ಕೆ ಹಣ ಮಾಡಿಕೊಂಡಿರುತ್ತಾರೆ. ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಅನುಕೂಲ ತಕ್ಕಂತೆ ಬಳಸಿಕೊಂಡಿರುತ್ತಾರೆ. ಈ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ ಪೋಲಿಸ್ ಲೋಖಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ಆದ ನಷ್ಟವನ್ನ ಮರಳಿ ಭರಿಸಬೇಕು. ನೀರಾವರಿ ಬಿಟ್ಟು ಒಣ ಬೇಸಾಯ ವ್ಯಾಲ್ಯೂವೇಶನ್ ಚಲನ್ ತೆಗೆದು ಖರೀದಿ ಮಾಡಿ ಕರ್ನಾಟಕ ಸರ್ಕಾರದ ಸರಿ ಸುಮಾರು ಅಂದಾಜು ಎರಡು ಕೋಟಿಗೂ ಅಧಿಕ ಆದಾಯವನ್ನು ನಷ್ಟವನ್ನು ಮಾಡಿರುತ್ತಾರೆ. ಈ ಕಛೇರಿಯಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು, ದಸ್ತು ಬರಹಗಾರರನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಲೋಕಾಯುಕ್ತ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದರು.ರಾಜ್ಯ ಮಟ್ಟದ ಅಧಿಕಾರಿಗಳನ್ನು ನೇಮಿಸಿ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಇಂಡಿ ತಾಲೂಕಿನಲ್ಲಿ ಈ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಇದನ್ನು ಖಂಡಿಸುತ್ತೆವೆ ಹಾಗೂ ಜಿಲ್ಲಾ ನೋಂದಣಾಧಿಕಾರಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ? ಇದು ನಾಚಿಗೇಡಿನ ಸಂಗತಿ. ಜಿಲ್ಲಾಧಿಕಾರಿಗಳು ಇವರನ್ನು ಕೂಡಲೆ ಸೇವೆಯಿಂದ ವಜಾ ಮಾಡಬೇಕು ಎಂದರು.ಈ ಕಛೇರಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಲೇ ಬೇಟಿ ನೀಡಿ ಪ್ರತಿಯೊಂದು ದಾಖಲಾತಿಗಳನ್ನು ಸಮಗ್ರ ತನಿಖೆ ಮಾಡಬೇಕು. ಸರ್ಕಾರಕ್ಕೆ ಆದ ನಷ್ಟವನ್ನು ಅವರಿಂದ ಭರಿಸಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕರವೇ ವತಿಯಿಂದ ಉಗ್ರ ಹೋರಾಟ ಮಾಡಲಗುವುದು ಎಂದರು. ಈ ಸಂದರ್ಭದಲ್ಲಿ ಮಹೇಶ ಹೂಘಾರ, ಈರಣಗೌಡ ಪಾಟೀಲ, ವಿಠ್ಠಲ ಸೊನ್ನ, ತಿಮ್ಮಪ್ಪ ಖೇಡಗಿ, ಸಿದ್ದಗೊಂಡ ಪೂಝಾರಿ, ಖಾಜಪ್ಪ ಮುಲ್ಲಾ, ಕಿರಣ್ ಪೂಜಾರಿ, ಸಿದ್ದರಾಮ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.