ಒಕ್ಕೂಟ ಸರ್ಕಾರದ ಅಕ್ಕಿ ನಿರಾಕರಣೆ ಖಂಡಿಸಿ ಸಿಪಿಐಎಂ ಪಕ್ಷದ ವತಿಯಿಂದ ಮನವಿ
ರೋಣ 21 : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿಂದು ರಾಜ್ಯ ಸರ್ಕಾರ ಜುಲೈ 01 ರಿಂದ ಬಿ.ಪಿ.ಎಲ್,ಅಂತ್ಯೋದಯ ಕಾರ್ಡ್ ಗಳಿಗೆ 5 ಕೆ.ಜಿ.ಅಕ್ಕಿಯನ್ನು ಹೆಚ್ಚಿಸಿ 10 ಕೆ.ಜಿ ಅಕ್ಕಿಯನ್ನು ನೀಡಲು ನಿರ್ಧರಿಸಿದ್ದು,ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರ ಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿ ಸಿಪಿಐಎಂ ಪಕ್ಷದ ವತಿಯಿಂದ ತಹಶೀಲ್ದಾರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ತಾಲೂಕಾಧ್ಯಕ್ಷ ಮಹೇಶ ಹಿರೇಮಠ ಮಾತನಾಡಿ ಕೇಂದ್ರ ಸರ್ಕಾರವು ರಾಜ್ಯದ ಜನರಿಗೆ ಶಿಕ್ಷಣ,ಆರೋಗ್ಯ ಆಹಾರ ಧಾನ್ಯವನ್ನು ಭಾರತ ಆಹಾರ ನಿಗಮದ ಮೂಲಕ ಒದಗಿಸಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಮುಂದಿನ ದಿನಮಾನಗಳಲ್ಲಿ ಉಘ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಸಂಕಪ್ಪ ಕರಡಿ,ಮೈಲಾರ್ಪ ಮಾದರ,ಸಲೀಂ ಬಾಜಿಗಾರ,ಮೌನೇಶ ಛತ್ರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.