ಅಂತರರಾಷ್ಟ್ರೀಯ

ಪೆರು ನೂತನ ಅಧ್ಯಕ್ಷರಾಗಿ ಪೆಡ್ರೋ ಕ್ಯಾಸ್ಟಿಲ್ಲೋ ಪ್ರಮಾಣ ವಚನ ಸ್ವೀಕಾರ

ಪೆರು ನೂತನ ಅಧ್ಯಕ್ಷರಾಗಿ ಪೆಡ್ರೋ ಕ್ಯಾಸ್ಟಿಲ್ಲೋ ಪ್ರಮಾಣ ವಚನ ಸ್ವೀಕಾರ

  ಲಿಮಾ, ಜುಲೈ 28 : ಪೆರು ದೇಶದ ನೂತನ ಅಧ್ಯಕ್ಷರಾಗಿ ಪೆಡ್ರೋ ಕ್ಯಾಸ್ಟಿಲ್ಲೋ ಲಿಮಾದ ರಾಷ್ಟ್ರ ಸಂಸತ್‍ ನಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

  ಅಧ್ಯಕ್ಷೀಯ ಚುನಾವವಣೆಯಲ್ಲಿ ಬಲ ಪಂಥೀಯ ಎದುರಾಳಿಯನ್ನು ಕ್ಯಾಸ್ಟಿಲ್ಲೋ ಮಣಿಸುವುದರೊಂದಿಗೆ ದೇಶದಲ್ಲಿ ಕಳೆದ ಕೆಲ ವಾರಗಳಲ್ಲಿ ಎದುರಾಗಿದ್ದ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿದೆ.     

 ಶತಮಾನಗಳಿಂದ ತುಳಿತಕ್ಕೊಳ್ಳಗಾದ ವರ್ಗಗಳ ಏಳಿಗೆಗೆ ಶ್ರಮಿಸುವುದಾಗಿ ಕ್ಯಾಸ್ಟಿಲ್ಲೋ ಈ ಸಂದರ್ಭದಲ್ಲಿ ಹೇಳಿದ್ದಾರೆ. 

 ಅಧಿಕಾರ ಸ್ವೀಕರಿಸಿದ ತಕ್ಷಣವೇ ಕ್ಯಾಸ್ಟಿಲ್ಲೋ ಅನೇಕ ಸುಧಾರಣೆಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಹೊಸ ಸಂವಿಧಾನ ರಚನೆ ಪ್ರಮುಖವಾಗಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಟ, ಆರ್ಥಿಕತೆ ಚೇತರಿಕೆ, ವಿಜ್ಞಾನ ಮತ್ತು ಆವಿಷ್ಕಾರಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸಹ ಸುಧಾರಣೆಗಳಲ್ಲಿ ಸೇರಿವೆ. 

  ತಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿರುವ ಜನತೆಯನ್ನು ನಿರಾಸೆಗೊಳಿಸುವುದಿಲ್ಲ ಎಂದು ಕ್ಯಾಸ್ಟಿಲ್ಲೋ ಹೇಳಿದ್ದಾರೆ. 

ಸುದ್ದಿ ಓದಿ