ಮೂಡಲಗಿ

ದೇವರ ನಾಮಸ್ಮರಣೆಯಿಂದ ಜೀವನದಲ್ಲಿ ನೆಮ್ಮದಿ: ಅನ್ನದಾನೇಶ್ವರ ಸ್ವಾಮೀಜಿ

ದೇವರ ನಾಮಸ್ಮರಣೆಯಿಂದ ಜೀವನದಲ್ಲಿ ನೆಮ್ಮದಿ: ಅನ್ನದಾನೇಶ್ವರ ಸ್ವಾಮೀಜಿ

ಮೂಡಲಗಿ 21: ಸಮಾಜದಲ್ಲಿ ಹಲವಾರು ಜನ ದೇವರು ಇಲ್ಲ ಎಂದು ವಾದಿಸುತ್ತಿದ್ದಾರೆ. ಆದರೇ ವಿಜ್ಞಾನಿಗಳೇ ಚಂದ್ರಯಾನ ಉಡಾವಣೆ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವರು ನಂಬಿದವರಿಗೆ ಒಳ್ಳೆಯದಾಗುತ್ತದೆ ಎಂಬುದು ತಲೆತಲಾಂತರದಿಂದ ಬಂದ ನಂಬಿಕೆ. ಆ ನಂಬಿಕೆಯೇ ಇಂದು ದೇವರು ಇದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬಂಡಿಗಣಿಯ ಬಸವಗೋಪಾಲ ನೀಲ ಮಾಣಿಕ್ಯ ಮಠದ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣದ 40ನೇ ವರ್ಷದ ನವರಾತ್ರಿ ಉತ್ಸವದ ಐದನೇ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರ ನಾಮಸ್ಮರಣೆಯ ಜೊತೆಗೆ ಜೀವನ ನಡೆಸಿದರೇ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದರು. 

ಹುಬ್ಬಳ್ಳಿ ಜಡಿಸಿದ್ದಾಶ್ರಮದ ರಾಮಾನಂದ ಮಹಾಸ್ವಾಮೀಜಿ ಹಾಗೂ ಶಿರಸಂಗಿಯ ಕಾಳಿಕಾ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಪಿ.ಬಿ.ಬಡಿಗೇರ ಮಾತನಾಡಿ, ದೇವರಲ್ಲಿ ನಂಬಿಕೆಯನಿಟ್ಟು ಕೆಲಸ ಕಾರ್ಯಗಳನ್ನು ಮಾಡಿದರೇ ಆ ನಂಬಿಕೆಗೆ ಯಾವತ್ತು ಮೋಸ ಆಗದು. ದೇವಿಯ ಪುರಾಣ ಕಥೆಗಳು ಇಡೀ ನಾಡಿನಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿವೆ ಎಂದರು. ಭಜನಾ ಮಂಡಳಿಯಿಂದ ಭಜನಾ, ಮತ್ತು ಮಹಾಮಂಗಳಾರತಿ ನಂತರ ಅನ್ನ ಸಂತರೆ​‍್ಣ ಕಾರ್ಯಕ್ರಮ ಜರುಗಿತು.  

ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ರಾವಸಾಹೇಬ ಬೆಳಕೂಡ, ರಾಮಪ್ಪ ಬೆಳಕೂಡ, ಭಗವಂತ ಪತ್ತಾರ ಹಾಗೂ ಉತ್ಸವ ಕಮೀಟಿಯ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು. ಭಗವಂತ ಪತ್ತಾರ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ