ಸೌಹಾರ್ದತೆ ಯಿಂದ ಬದುಕಿದರೆ ಮಾತ್ರ ಶಾಂತಿ ಲಭಿಸುವದು: ಸುನಿಲಕುಮಾರ ನಾತ್ರಾಜಿ
ಹುಕ್ಕೇರಿ,01 : ಸೌಹಾರ್ದತೆ ಯಿಂದ ಬದುಕಿದರೆ ಮಾತ್ರ ಶಾಂತಿ ಲಭಿಸುವದು ನಿರಂಕಾರಿ ಮಂಡಳಿ ಮುಖ್ಯಸ್ಥ ಸುನಿಲಕುಮಾರ ನಾತ್ರಾಜಿ.ಜಾತಿ ಮತ ಭೇದ ಮತ್ಸರ ಬಿಟ್ಟು ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಜೀವನದಲ್ಲಿ ಶಾಂತಿ , ಸುಭೀಕ್ಷೆ ದೊರಕುವದು ಎಂದು ಸಂತ ನಿರಂಕಾರಿ ಸತ್ಸಂಗ ಮಂಡಳಿ ಕರ್ನಾಟಕ ಜೋನಲ್ ಇನ್ ಚಾರ್ಜ ಸುನಿಲಕುಮಾರ ನಾತ್ರಾಜಿ ಹೇಳಿದರು.
ಅವರು ಇಂದು ಹುಕ್ಕೇರಿ ನಗರದ ನಿರಂಕಾರಿ ಮಂಡಳಿ ಹಮ್ಮಿಕೊಂಡ ಐದನೇ ವರ್ಷದ ವಿಶಾಲ ಸಂತ ನಿರಂಕಾರಿ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಜೀವನದಲ್ಲಿ ಶಾಂತಿ ಸುಭೀಕ್ಷೆ ಲಭಿಸಬೇಕಾದರೆ ಸರ್ವ ಧರ್ಮಿಯರು ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ,ಎಲ್ಲಾ ಧರ್ಮದ ಗುರುಗಳ ವಚನಗಳು ಒಂದೆಯಾಗಿರುತ್ತವೆ ಕಾರಣ ಮಹಾ ಜನತೆ ಇತಂಹ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುವಿನ ಆಶಿರ್ವಾದ ಪಡೆಯುವದು ಅವಶ್ಯವಾಗಿದೆ ಎಂದರು.
ನಂತರ ವಿವಿಧ ಭಾಗಗಳಿಂದ ಆಗಮಿಸಿದ ಸಂತರಿಗೆ ಶ್ವೇತ ವರ್ಣದ ಶಾಲೂ ನೀಡಿ ಸತ್ಕರಿಸಲಾಯಿತು.ನಂತರ ಹುಕ್ಕೇರಿ ನಿರಂಕಾರಿ ಮಂಡಳಿ ಜ್ಞಾನ ಪ್ರಚಾರಕ, ಸಂಯೋಜಕ ಮಾರುತಿ ಮೋರೆ ಮಾತನಾಡಿ ದೇಹಲಿಯ ನಿರಂಕಾರಿ ಸದ್ಗುರು ಮಾತಾಜೀ ಸುಧಿಕ್ಷಾ ಸವಿಂದ್ರ ಹರದೇವ ಮಹಾರಾಜ ರವರ ಕೃಪಾಶಿರ್ವಾದ ದಿಂದ ಕರ್ನಾಟಕ ಜೋನಲ್ಲ್ ಇನ್ ಚಾರ್ಜ ಸುನೀಲಕುಮಾರ ರಾತ್ರಾಜಿ ಇವರ ಉಪಸ್ಥಿತಿಯಲ್ಲಿ ಐದನೇ ವರ್ಷದ ವಿಶಾಲ ಸತ್ಸಂಗ ಕಾರ್ಯಕ್ರಮದಲ್ಲಿ ಬ್ರಹ್ಮ ಜ್ಞಾನದ ಪ್ರಾಪ್ತಿ,ದೇವರ ಪರಿಚಯ ಮತ್ತು ವಿಷೇಶ ಸತ್ಸಂಗ, ಮಕ್ಕಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ , ಸತ್ಸಂಗದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಸಂತ ನಿರಂಕಾರಿ ಮಂಡಳಿ ಸದಸ್ಯರು ಆಗಮಿಸಿದ್ದಾರೆ ಎಂದರು
ಈ ಸಂದರ್ಭದಲ್ಲಿ ನಿರಂಕಾರಿ ಸದಸ್ಯರಾದ ಭರಮಣ್ಣಾ ಜಾಧವ ಬಸವಣ್ಣಿ ದೊಡಮನಿ, ಸಿದ್ದೇಶ ಬೆನ್ನಾಡಿಕರ, ಕೆಂಪಣ್ಣಾ ಅಂಬಲೆ, ಅಶೋಕ ಕಲಾಜ, ರಮೇಶ ಭೊವಿ, ರಾಜು ಕೋಷ್ಟಿ, ಶಂಕರ ಕುರಣಿ, ಚಂದು ಗಂಗಣ್ಣವರ, ಸಂದೀಪ ಸೂರ್ಯವಂಶಿ, ರವಿ ಕದಂ ಸೇರಿದಂತೆ ಸೇವಾದಳ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ನಗರಗಳ ನಿರಂಕಾರಿ ಮುಖಿಗಳು,ಅಪಾರ ಭಕ್ತರು ಉಪಸ್ಥಿತರಿದ್ದರು.