ಮೂಡಲಗಿ

ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ

ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ

ಲೋಕದರ್ಶನ ವರದಿ 

ಮೂಡಲಗಿ 19: ಹಾಲುಮತ ಮಹಾಸಭೆಯವರು ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ನವೆಂಬರ 21ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಇದು ಕುರುಬ ಸಮಾಜದ ದಶಕಗಳ ಹಳೆಯ ಬೇಡಿಕೆಯಾಗಿದ್ದು ಸುಮಾರು 3 ವರ್ಷಗಳ ಮುಂಚೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಬೃಹತ್ ಸಮ್ಮೇಳನ ನಡೆಸಲಾಗಿತ್ತು. ತದನಂತರ ಕರ್ನಾಟಕ ಸರಕಾರ ಗಿರಿಜನ ಸಂಶೋಧನ ಸಂಸ್ಥೆಯ ವತಿಯಿಂದ ರಾಜ್ಯಾದ್ಯಂತ ಕುರುಬ ಸಮಾಜದ ಬೇಡಿಕೆ ಕುರಿತಂತೆ ಸರ್ವೇಕ್ಷಣೆ ನಡೆಸಿದರೂ ಮುಂದಿನ ಕ್ರಮ ಜರುಗಿಸಲು ಮೀನ, ಮೇಷ ಎಣಿಸುತ್ತಿದೆ. ಆದ್ದರಿಂದ, ಸರಕಾರದ ಮೇಲೆ ಒತ್ತಡ ಹಾಕಲು ಹಾಲುಮತ ಮಹಾಸಭೆಯ ಯುವಗೆಳೆಯರು ಈ ಧರಣಿ ಸತ್ಯಾಗ್ರಹ ಸಂಘಟಿಸಿದ್ದು ರಾಜ್ಯಾದ್ಯಂತ ಕಾರ್ಯಕರ್ತರು ಭಾಗವಹಿಸುವ ನೀರೀಕ್ಷೆಯಿದೆ. ಕಾರಣ ಅರಭಾವಿ ವಿಧಾನಸಭೆ ಮತಕ್ಷೇತ್ರದ ಕುರುಬ ಸಮಾಜದ ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸತ್ಯಾಗ್ರಹದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅರವಿಂದ ದಳವಾಯಿ ಕೋರಿದ್ದಾರೆ. 


ಸುದ್ದಿ ಓದಿ