ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಎಚ್‌.ಎ. ಕದರಪೂರಕರ ಆತ್ಮೀಯ ಬೀಳ್ಕೊಡುಗೆ

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಎಚ್‌.ಎ. ಕದರಪೂರಕರ ಆತ್ಮೀಯ ಬೀಳ್ಕೊಡುಗೆ Panchayat Raj Engineering Sub Division AEE H.A. Kind regards

ಸವದತ್ತಿ 30 : ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್‌.ಎ. ಕದರಪೂರಕರ ಅವರು ದೀರ್ಘಕಾಲದ ನಿಷ್ಠಾವಂತ ಸೇವೆಯ ನಂತರ ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಸ್ಥಳೀಯ ಅಧಿಕಾರಿಗಳು ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದ ಅವರು, ಎಚ್‌.ಎ. ಕದರಪೂರಕರ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ, ಅದರಲ್ಲೂ ವಿಶೇಷವಾಗಿ ಸವದತ್ತಿಯಲ್ಲಿ ಕಳೆದ ಇಪ್ಪತ್ತು ವರ್ಷಗಳ ಕಾಲ ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಜನರ ವಿಶ್ವಾಸ ಗಳಿಸಿ ಅವರು ರೂಪಿಸಿದ ಕಾರ್ಯವೈಖರಿ ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಸೇವೆಗೆ ಎಷ್ಟೇ ಹೊಗಳಿದರೂ ಸಾಲದು.

ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ, ಎಂದು ಶುಭ ಹಾರೈಸಿದರು.ಬೆಳಗಾವಿ ಪಂಚಾಯತ್ ರಾಜ್ ಅಧಿಕಾರಿ ಕೋಳಿ, ಮಾತನಾಡಿ, ಅವರು ಕದರಪೂರಕರ ಅವರ ಉತ್ತಮ ಗುಣಗಳನ್ನು ಮತ್ತು ವಿಶಾಲ ಮನೋಭಾವವನ್ನು ಶ್ಲಾಘಿಸಿ, ಅವರ ಸೇವಾ ಅವಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಶಿವಪ್ರಕಾಶ್ ಪಾಟೀಲ್, ಆರ್‌.ಆರ್‌. ಕುಲಕರ್ಣಿ, ಮಲಯ್ಯ ಕಂಬಿ, ಬಸವರಾಜ ಅಯ್ಯನಗೌಡರ, ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು, ಕದರಪೂರಕರ ಅವರೊಂದಿಗಿನ ಒಡನಾಟ ಮತ್ತು ಅವರ ಸೇವಾ ಅವಧಿಯ ಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿದರು. ನಂತರ ಅಧಿಕಾರಿಗಳು ಎಚ್‌.ಎ. ಕದರಪೂರಕರ ಅವರನ್ನು ಸನ್ಮಾನಿಸಿ ಗೌರವಿಸಿದರು.