ಅಂತರರಾಷ್ಟ್ರೀಯ

ದೇಶಿಯವಾಗಿ ಕೊರೊನಾ ನಿರೋಧಕ ಲಸಿಕೆ ಅಭಿವೃದ್ದಿಪಡಿಸಿದ ಪಾಕಿಸ್ತಾನ....!

ದೇಶಿಯವಾಗಿ ಕೊರೊನಾ  ನಿರೋಧಕ ಲಸಿಕೆ  ಅಭಿವೃದ್ದಿಪಡಿಸಿದ  ಪಾಕಿಸ್ತಾನ....!

ಇಸ್ಲಾಮಾಬಾದ್‌,   ಜೂನ್‌  2: ದೇಶಿಯವಾಗಿ ಕೊರೊನಾ  ನಿರೋಧಕ    ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ  ಪಾಕಿಸ್ತಾನ ಹೇಳಿಕೊಂಡಿದೆ.  ಲಸಿಕೆಗೆ  "ಪಾಕ್ವಾಕ್‌"  ಎಂದು  ಹೆಸರಿಟ್ಟಿದೆ. ಮಂಗಳವಾರ   ನಡೆದ ವಿಶೇಷ ಕಾರ್ಯಕ್ರಮದಲ್ಲಿ  ಲಸಿಕೆಗೆ  ಚಾಲನೆ  ನೀಡಲಾಯಿತು.

ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸಲಹೆಗಾರ ಡಾ.ಫೈಸಲ್ ಸುಲ್ತಾನ್  ಲಸಿಕೆ  ಕುರಿತು  ಮಾಹಿತಿ ನೀಡಿದರು.  ಈವರೆಗೆ  ಪಾಕಿಸ್ತಾನ,  ಚೀನಾ  ಹಾಗೂ  ರಷ್ಯಾದಿಂದ ಲಸಿಕೆಗಳನ್ನು  ಸಂಗ್ರಹಿಸುತ್ತಿತ್ತು.  ಆದರೆ,  ಈಗ  ಪಾಕಿಸ್ತಾನ  ಲಸಿಕೆಯನ್ನು ದೇಶಿಯವಾಗಿ ತಯಾರಿಸಿದೆ  ಎಂದು  ಹೇಳಲಾಗುತ್ತಿರುವ   "ಪಾಕ್ವಾಕ್‌"   ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಸುಲ್ತಾನ್ ಯಾವುದೇ ಮಾಹಿತಿ ನೀಡಿಲ್ಲ. ನಾವು ನಮ್ಮ ಲಸಿಕೆಯನ್ನು ಸಿದ್ಧಪಡಿಸಿದ್ದೇವೆ. ಕೆಲ  ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ  ಉತ್ಪಾದನೆ  ಪ್ರಾರಂಭಿಸಲಾಗುವುದು  ಎಂದು ವಿವರಿಸಿದರು.

ಲಸಿಕೆ ಬಿಡುಗಡೆಯ ಸಂದರ್ಭದಲ್ಲಿ ಡಾ.ಫೈಸಲ್ ಮಾಧ್ಯಮಗಳೊಂದಿಗೆ   ಮಾತನಾಡಿ , ನಮ್ಮ ದೇಶ ತನ್ನದೇ ಆದ ಲಸಿಕೆ ತಯಾರಿಸಿಕೊಳ್ಳಬೇಕಾದ    ಅಗತ್ಯವಿತ್ತು  ಈಗ ಅದು  ಪೂರ್ಣಗೊಂಡಿದೆ.  ಶೀಘ್ರದಲ್ಲೇ   ಬೃಹತ್‌ ಉತ್ಪಾದನೆ ಪ್ರಾರಂಭಿಸಲಿದ್ದೇವೆ. ಈ ಲಸಿಕೆ ತಯಾರಿಸಲು ನಮ್ಮ ತಂಡ  ಸಾಕಷ್ಟು ತೊಂದರೆ ಎದುರಿಸಿತು  ಎಂದು ನಾನು ಹೇಳುವುದಿಲ್ಲ.  ಈ ಸಮಯದಲ್ಲಿ,  ನಮ್ಮ ಮಿತ್ರ ದೇಶ ಚೀನಾ, ನಮ್ಮೊಂದಿಗೆ ದೃಢವಾಗಿ ನಿಂತಿತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ತಂಡ ಸಹ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.  ಅಷ್ಟೇ ಅಲ್ಲ .. ಲಸಿಕೆ ತಯಾರಿಸುವುದು ಅಷ್ಟು ಸುಲಭವಲ್ಲ. ಕಚ್ಚಾ ವಸ್ತುಗಳಿಂದ ಲಸಿಕೆ  ಸಿದ್ದಪಡಿಸುವುದು ದೊಡ್ಡ ಸವಾಲು ಎಂದು ವಿವರಿಸಿದ್ದಾರೆ.  ಎಲ್ಲಾ ಸಮಸ್ಯೆಗಳ  ನಡುವೆಯೂ  ಲಸಿಕೆ ತಯಾರಿಸುವಲ್ಲಿ  ತಮ್ಮ ತಂಡ ಯಶಸ್ವಿಯಾಗಿದೆ.  ಇಂದು ದೇಶಕ್ಕೆ ಅತ್ಯಂತ ಮುಖ್ಯವಾದ ದಿನವೆಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ  ಹಾಜರಿದ್ದ ರಾಷ್ಟ್ರೀಯ ಕಮಾಂಡ್  ಹಾಗೂ  ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಅಸಾದ್ ಉಮರ್   ಕೊರೊನಾ  ಎರಡನೇ   ಅಲೆಯಲ್ಲಿ ಸೋಂಕಿಗೆ ಒಳಗಾದವರು,  ಮೊದಲ ಅಲೆಯಲ್ಲಿ ಸೋಂಕಿಗೆ ಒಳಗಾದವರಿಗಿಂತ ಹೆಚ್ಚು ಬಳಲುತ್ತಿದ್ದಾರೆ.  ಆಕ್ಸಿಜನ್‌  ಲಭ್ಯವಾಗದೆ   ಶೇ 60  ಕೋವಿಡ್‌  ಬಾಧಿತರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ  ಚೀನಾದ ರಾಯಭಾರಿ ನಾಂಗ್ ರೊಂಗ್  ಮಾತನಾಡಿ, ಈ ಲಸಿಕೆ ತಯಾರಿಕೆ  ಪಾಕಿಸ್ತಾನ ಜೊತೆಗಿನ   ನಮ್ಮ ಪ್ರಬಲ  ಸ್ನೇಹವನ್ನು  ತೋರಿಸುತ್ತದೆ. ಚೀನಾದ  ಲಸಿಕೆ  ಕೊಡುಗೆ   ಸ್ವೀಕರಿಸಿದ ಮೊದಲ ದೇಶ ಪಾಕಿಸ್ತಾನ. ಲಸಿಕೆ ತಯಾರಿಕೆಯ  ಕೆಲಸ  ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು. ಅದಕ್ಕೆ   ಚೀನಾದ ಸಿನೊವಾಕ್ ಬೆಂಬಲ ನೀಡಿದೆ.


ಸುದ್ದಿ ಓದಿ