ಅಂತರರಾಷ್ಟ್ರೀಯ

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಕೊರೊನಾ ಸೋಂಕು

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೆ  ಕೊರೊನಾ ಸೋಂಕು

ಇಸ್ಲಾಮಾಬಾದ್,  ಮಾ 20 : ಎರಡು ದಿನಗಳ ಹಿಂದೆ  ಕೊರೊನಾ ಲಸಿಕೆಯ ಮೊದಲ  ಡೋಸು  ಪಡೆದುಕೊಂಡಿದ್ದ   ಪಾಕಿಸ್ತಾನ  ಪ್ರಧಾನಿ  ಇಮ್ರಾನ್‌ ಖಾನ್‌   ಕೊರೊನಾ  ಸೋಂಕಿಗೆ  ಒಳಗಾಗಿರುವುದು   ಆ ದೇಶದಲ್ಲಿ   ಕಳವಳ  ಉಂಟು ಮಾಡಿದೆ. ಪ್ರಧಾನಿ  ಇಮ್ರಾನ್ ಖಾನ್‌  ಅವರಿಗೆ  ಕೊರೊನಾ      ಸೋಂಕು ತಗುಲಿರುವುದನ್ನು   ಆ ದೇಶದ  ಆರೋಗ್ಯ ಸಚಿವ ಫೈಸಲ್ ಸುಲ್ತಾನ್ ಶನಿವಾರ ತಿಳಿಸಿದ್ದಾರೆ. ಪ್ರಧಾನಿ ಇಮ್ರಾನ್‌  ಖಾನ್‌  ಪ್ರಸ್ತುತ ಸ್ವಯಂ ಐಸೋಲೇಷನ್‌ ನಲ್ಲಿದ್ದಾರೆ.   ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಕೊರೊನಾ  ವೈರಸ್ ಪ್ರಕರಣಗಳ ಸಂಖ್ಯೆ  ಬಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.ಶನಿವಾರ 3,876 ಪ್ರಕರಣಗಳು ದಾಖಲಾಗಿವೆ. ಇದರ ಪರಿಣಾಮವಾಗಿ, ದೇಶದಲ್ಲಿ ಸಕಾರಾತ್ಮಕತೆ ಪ್ರಕರಣಗಳು ಶೇ.  9.4 ಕ್ಕೆ ತಲುಪಿದೆ.  ಹೊಸ ಪ್ರಕರಣಗಳೂ  ಸೇರಿದಂತೆ ದೇಶದಲ್ಲಿ ಈವರೆಗೆ ಒಟ್ಟು 6,23,135 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ, 40  ಮಂದಿ  ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು,ಇದರಿಂದ  ಒಟ್ಟು ಸಾವಿನ ಸಂಖ್ಯೆ  13,799 ಕ್ಕೆ ತಲುಪಿದೆ.  ಅಲ್ಲದೆ, ಇದುವರೆಗೆ 5,79,760  ಮಂದಿ ಕೊರೊನಾದಿಂದ  ಚೇತರಿಸಿಕೊಂಡಿದ್ದು. 2,122  ಮಂದಿ   ಸೋಂಕಿತರ  ಸ್ಥಿತಿ ಗಂಭೀರವಾಗಿದೆ  ಎಂದು  ಆರೋಗ್ಯ  ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.



ಸುದ್ದಿ ಓದಿ