ಅಂತರರಾಷ್ಟ್ರೀಯ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಶಲ್ಟ್ಜ್ ನಿಧನ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಶಲ್ಟ್ಜ್  ನಿಧನ

ವಾಷಿಂಗ್ಟನ್, ಫೆಬ್ರವರಿ 8 : ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಪಿ ಶಲ್ಟ್ಜ್  100 ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ತಮ್ಮ ನಿವಾಸದಲ್ಲಿ  ನಿಧನರಾಗಿದ್ದಾರೆ. 30 ವರ್ಷಗಳ ಕಾಲ ಕೆಲಸ ಮಾಡಿದ  ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್ಸ್ಟಿಟ್ಯೂಷನ್ ಅವರ ಸಾವಿನ ಮಾಹಿತಿ ನೀಡಿದೆ. ಅಮೆರಿಕದ ಅತ್ಯಂತ ಪರಿಣಾಮಕಾರಿಯಾದ ನೀತಿ ನಿರೂಪಕರಲ್ಲಿ ಒಬ್ಬರಾದ ಜಾರ್ಜ್ ಪಿ. ಶಲ್ಟ್ಜ್ ಶನಿವಾರ ನಿಧನರಾಗಿದ್ದಾರೆ. ಅಂದಿನ  ಅಧ್ಯಕ್ಷ ರೊನಾಲ್ಡ್ ರೇಗನ್ ಜೊತೆಗೆ, ಶೀತಲ ಸಮರ ಅಂತ್ಯಗೊಳಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು ಎಂದೂ ಹೂವರ್ ಇನ್ಸ್ಟಿಟ್ಯೂಷನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ವಿವಿಧ , ಪ್ರಮುಖ  ಹುದ್ದೆಗಳನ್ನು ಅಲಂಕರಿಸಿದ್ದ ಶಲ್ಟ್ಜ್, ಅಮೆರಿಕದ ಮೂವರು ಅಧ್ಯಕ್ಷರ ಜೊತೆ  ಕೆಲಸ ಮಾಡಿದ ಕೀರ್ತಿಗೂ ಭಾಜನರಾಗಿದ್ದರು . ಷಲ್ಟ್ಜ್ 1920 ರಲ್ಲಿ  ನ್ಯೂಯಾರ್ಕ್ ನಗರದಲ್ಲಿ ಜನಿಸಿದ ಅವರು, ನಂತರ 1942 ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 



ಸುದ್ದಿ ಓದಿ