ರಷ್ಯಾದ ಜನಪ್ರಿಯ ಚಿತ್ರ ನಟ ವಾಸಿಲಿ ಲಾನೊವೊಯ್ ನಿಧನ
ಮಾಸ್ಕೋ, ಜನವರಿ 29 : ಕೊರೋನ ಸೋಂಕಿಗೆ ತುತ್ತಾಗಿದ್ದ ರಷ್ಯಾದ ಪ್ರಸಿದ್ಧ, ಜನಪ್ರಿಯ ಚಿತ್ರ ತಾರೆ, ವಾಸಿಲಿ ಲಾನೊವೊಯ್ ಮೃತಪಟಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಈ ವಿಷಯ ತಿಳಿಸಿದ್ದು, ನಟನಿಗೆ ಈ ಹಿಂದೆ ಕರೋನ ಸೋಂಕು ತಗುಲಿತ್ತು ನಂತರ ಅವರ ಪತ್ನಿ, ಪ್ರಸಿದ್ಧ ನಟಿ ಐರಿನಾ ಕುಪ್ಚೆಂಕೊ ಅವರೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಮಗೆ ವಿಷಾದಕರ ಸುದ್ದಿ ಬಂದಿದೆ ಎಂದರು. ಶ್ರೇಷ್ಠ ನಟ, ರಾಷ್ಟ್ರವ್ಯಾಪಿ ಜನಪ್ರಿಯ ವಾಸಿಲಿ ಲಾನೊವೊಯ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ನಟನೆ, ಉದಾತ್ತ ಅಭಿನಯದ ಪಾತ್ರಗಳು ಲಕ್ಷಾಂತರ ಅಭಿಮಾನಿಗಳಿಗೆ ಸದಾ ಪ್ರೇರೆಣೆಯಾಗಿದೆ ಇನ್ನು ಚಿತ್ರಮಂದಿರಗಳಲ್ಲಿನ ಅವರ ಪಾತ್ರಗಳನ್ನು ಮರೆಯುವುದು ಅಸಾಧ್ಯ, ಹೀಗಾಗಿ ಸೆಮೆನೋವಿಚ್[ಲಾನೊವೊಯ್] ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುವುದಾಗಿ ಸೊಬಯಾನಿನ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಲಾನೊವೊಯ್ ಜನವರಿ 16, 1934 ರಂದು ಜನಿಸಿದರು ಮತ್ತು ಮಾಸ್ಕೋದ ವಕ್ತಾಂಗೋವ್ ಥಿಯೇಟರ್‌ನಲ್ಲಿ ಕೊನೆಯ ತನಕ ಕೆಲಸ ಮಾಡಿದ್ದರು. ವಾರ್ ಅಂಡ್ ಪೀಸ್" (1966-1967), "ಸೋಲಾರಿಸ್" (1968), "ಆಫೀಸರ್ಸ್" (1971) ಮತ್ತು "ಸೆವೆಟೀನ್ ಮೊಮೆಂಟ್ಸ್ ಆಫ್ ಸ್ಪ್ರಿಂಗ್" (1973) ಸೇರಿದಂತೆ ಅನೇಕ ಪ್ರಸಿದ್ಧ ಚಲನಚಿತ್ರಗಳಲ್ಲಿನ ಅವರ ಅಭಿನಯವನ್ನು ಜಗತ್ತು ಎಂದಿಗೂ ಮರೆಯಲಾಗದು.