ಅಂತರರಾಷ್ಟ್ರೀಯ

ಅಮೆರಿಕದ ಮಾಜಿ ಉಪಾಧ್ಯಕ್ಷ ವಾಲ್ಟರ್ ಮೊಂಡೇಲ್ ನಿಧನ

ಅಮೆರಿಕದ ಮಾಜಿ ಉಪಾಧ್ಯಕ್ಷ ವಾಲ್ಟರ್ ಮೊಂಡೇಲ್  ನಿಧನ

ವಾಷಿಂಗ್ಟನ್, ಎಪ್ರಿಲ್ 20 : ಅಮೆರಿಕದ ಮಾಜಿ ಉಪಾಧ್ಯಕ್ಷ ವಾಲ್ಟರ್ ಎಫ್ ಮೊಂಡೇಲ್ ಸೋಮವಾರ ನಿಧನ ಹೊಂದಿದ್ದು, ಅವರಿಗೆ 93 ವರ್ಷ.ವಯಸ್ಸಾಗಿತ್ತು. ಸಾವಿನ ಸುದ್ದಿಯನ್ನು  ಕುಟುಂಬ ದವಕ್ತಾರರು ತಿಳಿಸಿದ್ದರೂ ಆದರೂ  ಅವರ ಸಾವಿಗೆ ಕಾರಣವನ್ನು ವಕ್ತಾರರು ಬಹಿರಂಗಪಡಿಸಿಲ್ಲ ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊಂಡೇಲ್ ಡೌನ್ಟೌನ್ ಮಿನ್ನಿಯಾಪೋಲಿಸ್ನಲ್ಲಿರುವ ಅವರ ಮನೆಯಲ್ಲಿ ನಿಧನರಾದರು. ಅವರ ಪತ್ನಿ ಜೋನ್ ಕಳೆದ 2014 ರಲ್ಲಿ ನಿಧನರಾಗಿದ್ದರು.   ಮೊಂಡೇಲ್ 1960 ರ ಆರಂಭದಲ್ಲಿ ಮಿನ್ನೇಸೋಟದ ಅಟಾರ್ನಿ ಜನರಲ್ ಆಗಿದ್ದರು ಮತ್ತು ನಂತರ ಅವರು 1977 ಮತ್ತು 1981 ರ ನಡುವೆ ಜಿಮ್ಮಿ ಕಾರ್ಟರ್ ನೇತೃತ್ವದಲ್ಲಿ ದೇಶದ 42 ನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಾಗರಿಕ ಹಕ್ಕುಗಳ ಬಲವಾದ ಬೆಂಬಲಿಗರೆಂದು ಕರೆಯಲ್ಪಡುವ ಮೊಂಡೇಲ್, ಜಪಾನನಲ್ಲಿ ಅಮೆರಿಕದ  ರಾಯಭಾರಿಯಾಗಿಯೂ ಬಳಿಕ  ಇಂಡೋನೇಷ್ಯಾದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು . ಮಿನಿಸೋಟ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಪ್ರವೇಶ ಪಡೆಯುವ ಮೊದಲು ಅವರು ಎರಡು ವರ್ಷಗಳ ಕಾಲ ಅಮೆರಿಕ ಸೇನೆಯಲ್ಲೂ ಕೆಲಸ ಮಾಡಿದ್ದರು  



ಸುದ್ದಿ ಓದಿ