ಅಂತರರಾಷ್ಟ್ರೀಯ

ಕೋವಿಡ್‍-19: ಪಾಕಿಸ್ತಾನದಲ್ಲಿ 5 ಲಕ್ಷ ದಾಟಿದ ದೃಢಪಟ್ಟ ಪ್ರಕರಣಗಳ ಸಂಖ್ಯೆ

ಕೋವಿಡ್‍-19: ಪಾಕಿಸ್ತಾನದಲ್ಲಿ 5 ಲಕ್ಷ ದಾಟಿದ ದೃಢಪಟ್ಟ ಪ್ರಕರಣಗಳ ಸಂಖ್ಯೆ

ಇಸ್ಲಾಮಾಬಾದ್, ಜ 10 : ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಒಟ್ಟು 2,899 ಜನರಲ್ಲಿ ಕೊರೊನಾವೈರಸ್ ಧೃಡಪಡುವುದರೊಂದಿಗೆ ಅಲ್ಲಿ ಇದುವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 502,416 ಕ್ಕೆ ತಲುಪಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್‌ಸಿಒಸಿ) ಭಾನುವಾರ ತಿಳಿಸಿದೆ.ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 2,25,509 ಪ್ರಕರಣಗಳು ದಾಖಲಾಗಿದ್ದು, ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ 1,44,909 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಎನ್‌ಸಿಒಸಿ ಪ್ರಕಟಣೆಯಲ್ಲಿ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 46 ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ  ಸಾವಿನ ಸಂಖ್ಯೆ 10,644 ಕ್ಕೆ ಏರಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಾಕಿಸ್ತಾನದಾದ್ಯಂತದ ಆಸ್ಪತ್ರೆಗಳಲ್ಲಿ 2,804 ಕೊರೋನಾ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆಪಾಕಿಸ್ತಾನದಲ್ಲಿ ಈವರೆಗೆ 4.56,969 ಜನರು ಚೇತರಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶಾದ್ಯಂತ ವಿವಿಧ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಒಟ್ಟು 70,88,014 ಪರೀಕ್ಷೆಗಳನ್ನು ನಡೆಸಲಾಗಿದ್ದು, 623 ಆಸ್ಪತ್ರೆಗಳು ಕೊರೊನಾವೈರಸ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.



ಸುದ್ದಿ ಓದಿ