ಅಂತರರಾಷ್ಟ್ರೀಯ

ಚೀನಾದಿಂದ ಲಸಿಕೆ ಆಮದಿಗೆ ಇನ್ನೂ ಅಂತಿಮ ಆದೇಶ ನೀಡದ ಪಾಕಿಸ್ತಾನ

ಚೀನಾದಿಂದ ಲಸಿಕೆ ಆಮದಿಗೆ ಇನ್ನೂ ಅಂತಿಮ ಆದೇಶ ನೀಡದ ಪಾಕಿಸ್ತಾನ

ಇಸ್ಲಾಮಾಬಾದ್,  ಜ 16 :  ಕೋವಿಡ್ -19  ಸಾಂಕ್ರಾಮಿಕ  ನಿರೋಧಕ  ಲಸಿಕೆಗಳನ್ನು    ಆಮದು ಮಾಡಿಕೊಳ್ಳಲು ಅಂತಿಮ ಆದೇಶ ನೀಡಿಲ್ಲ ಎಂದು ಪಾಕಿಸ್ತಾನ ಹೇಳಿದೆ.   ಚೀನಾದಿಂದ ಲಸಿಕೆ ಆಮದು ಮಾಡಿಕೊಳ್ಳಲು ಇರುವ  ಏಕೈಕ    ನಿರ್ಬಂಧವನ್ನು ಶೀಘ್ರದಲ್ಲೇ ತೆಗೆದುಹಾಕಲಾಗುತ್ತಿದೆ ಎಂದು  ಪತ್ರಿಕೆಯೊಂದರಲ್ಲಿ  ಲೇಖನ  ಪ್ರಕಟಗೊಂಡ ಹಿನ್ನಲೆಯಲ್ಲಿ   ಪಾಕಿಸ್ತಾನ  ಈ  ಸ್ಪಷ್ಟನೆ  ನೀಡಿದೆ.  ಚೈನಾ  ಸರ್ಕಾರಿ ಸ್ವಾಮ್ಯದ ಸಿನೊಫಾರ್ಮ್  ಸಂಸ್ಥೆಯಿಂದ  ಪಾಕಿಸ್ತಾನ   ಕೋವಿಡ್ -19 ಲಸಿಕೆಯನ್ನು ಆಮದು ಮಾಡಿಕೊಳ್ಳಲಿದೆ  ಎಂದು ಪತ್ರಿಕೆಯೊಂದು ಈ ತಿಂಗಳ 13 ರಂದು ವರದಿ ಮಾಡಿದೆ.   ಕರಾಚಿಯಲ್ಲಿ ಲಸಿಕೆಯ  ಮೊದಲ ಹಂತದ  ಪ್ರಯೋಗಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಲಸಿಕೆ ಆಮದಿನ ಮೇಲಿನ ನಿರ್ಬಂಧಗಳನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ಅದು ಹೇಳಿದೆ.

ಆರೋಗ್ಯ  ಸಚಿವಾಲಯಕ್ಕೆ ಸಂಬಂಧಿಸಿದಂತೆ ಪ್ರಧಾನಿ  ಇಮ್ರಾನ್ ಖಾನ್  ಅವರ  ಸಲಹೆಗಾರ ಡಾ.ಫೈಜಲ್ ಖಾನ್  ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿ, ಕೋವಿಡ್ -19ರ ವಿರುದ್ದ   ಹೋರಾಡುತ್ತಿರುವ ಪಾಕಿಸ್ತಾನದ  ಮುಂಚೋಣಿ   ಕಾರ್ಯಕರ್ತರು ಹಾಗೂ  ​​ ಇತರರಿಗಾಗಿ  ತ್ವರಿತವಾಗಿ ಲಸಿಕೆ  ಆಮದು ಮಾಡಿಕೊಳ್ಳಲು  ಪ್ರಯತ್ನಿಸಲಾಗುತ್ತಿದೆ  ಎಂದು ಅವರು ಹೇಳಿದ್ದಾರೆ. ಆದರೆ,  ಲಸಿಕೆ ಪೂರೈಸುವಂತೆ   ಅಂತಿಮ   ಆದೇಶ ಇನ್ನೂ  ನೀಡಲಾಗಿಲ್ಲ. ಲಸಿಕೆ ತಯಾರಕರೊಂದಿಗೂ ಯಾವುದೇ ಒಪ್ಪಂದಕ್ಕೂ  ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚೀನಾ ಮೂಲದ ಸಿನೋಫಾರ್ಮ್ ಕಂಪನಿ  ಕೋವಿಡ್ -19 ಲಸಿಕೆಗೆ ಸಂಬಂಧಿಸಿದ  ಮಾಹಿತಿಯನ್ನು ಪಾಕಿಸ್ತಾನದ  ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಲಸಿಕೆ ಆಮದು ಮಾಡಿಕೊಳ್ಳಲು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ . "ನಾವು  ಕ್ಯಾನ್ಸಿನೊ  ಲಸಿಕೆ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ".  ಲಸಿಕೆ ಪ್ರಯೋಗಗಳು ಪ್ರಸ್ತುತ ನಡೆಯುತ್ತಿವೆ. ನಾವು ರಷ್ಯಾದ ಲಸಿಕೆ ಸ್ಪುಟ್ನಿಕ್ ಬಗ್ಗೆಯೂ ಆಸಕ್ತಿ ಹೊಂದಿದ್ದೇವೆ ಎಂದು  ಅವರು ತಿಳಿಸಿದ್ದಾರೆ.


ಸುದ್ದಿ ಓದಿ