ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ
ಮೂಡಲಗಿ 31: ಕಳೆದ 10 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ಕಾರ್ಯಕ್ರಮಗಳ ಬಗ್ಗೆ ನಾನು ಗಮನಿಸುತ್ತಿದ್ದು ಪೂಜ್ಯರು ಜನಹಿತ ಕಾರ್ಯಕ್ರಮಗಳನ್ನು ಸಾಕಷ್ಟು ಅಳವಡಿಕೆ ಮಾಡುತ್ತಿದ್ದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 05 ಆಕ್ಸಿಜನ್ಕಾನ್ಸಂಟ್ರೇಟರ್ ವಿತರಿಸಿದ್ದು ನಿಜಕ್ಕೂ ಇಲ್ಲಿಯ ಜನರಿಗೆ ತುಂಬಾ ಉಪಯುಕ್ತವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು
ಸೋಮವಾರ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 05 ಆಕ್ಸಿಜನ್ ಕಾನ್ಸಂಟ್ರೇಟರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿ ಮಾತನಾಡಿದರು,ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕೊರೊನಾದಿಂದ ಜನರು ನರಳುತ್ತಿರುವ ಸಂದರ್ಭದಲ್ಲಿ ಜನರ ಜೀವಾಳವಾಗಿ ಧರ್ಮಸ್ಥಳದ ಪೂಜ್ಯರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿ ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ವಿತರಿಸುತ್ತಿದ್ದಾರೆ ಎಂದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಳಗಾವಿ-2 ಜಿಲ್ಲೆಯ ನಿರ್ದೇಶಕ ಕೇಶವ ದೇವಾಂಗ್ ಕ್ಷೇತ್ರದವತಿಯಿಂದ ಆಸ್ಪತ್ರೆಗೆ ಕೊಡುತ್ತಿರುವ ವೇಂಟಿಲೇಟ್ರ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳು, ನಿರ್ಗತಿಕರಿಗೆ ವಿತರಿಸುತ್ತಿರುವ ಆಹಾರದ ಕೀಟ್ಗಳು,ಕೋವಿಡ್ ಪರಿಸ್ಥಿತಿಯನ್ನು ಎದುರಿಸುವಲ್ಲಿ ಧರ್ಮಸ್ಥಳದಿಂದ ಪ್ರಸ್ತುತ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಇವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಡಾ ಮೋಹನ ಭಸ್ಮೆ,ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಜಿಲ್ಲಾ ಜನ ಜಾಗ್ರತಿ ವೇದಿಕೆಯ ಸದಸ್ಯ ಭರಮಣ್ಣಾ ಉಪ್ಪಾರ, ಸಮುದಾಯ ಕೇಂದ್ರದ ವೈಧ್ಯಾಧಿಕಾರಿ ಭಾರತಿ ಕೋಣಿ, ಯೋಜನೆಯ ಪ್ರಬಂಧಕ ಪರಶುರಾಮ ಹಾಗೂ ಶಿವಾನಂದ ಬೈಲವಾಡ, ಮೇಲ್ವಿಚಾರಕಿ ಮಾನಸಿ, ಮೂಡಲಗಿ ತಾಲೂಕಾ ಪ್ರೇಸ್ ಅಸೋಸಿಯೆಶ್ನ ಅಧ್ಯಕ್ಷ್ ಲಕ್ಷ್ಮಣ ಅಡಿಹುಡಿ, ಪರ್ವಿನ್ ಹಾಗೂ ಆಸ್ಪತ್ರೇಯ ಸಿಬ್ಬಂದಿಗಳು ಉಪಸ್ಥಿತರಿದ್ದರು ಉಪಸ್ಥಿತರಿದ್ದರು,
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ಮೂಡಲಗಿ ತಾಲೂಕಿನ ಯೋಜನಾಧಿಕಾರಿ ದೇವರಾಜ ಎಂ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ರುಕ್ಮಿಣಿ ವಂದಿಸಿದರು.