ಗೋಕಾಕ ಪೊಲೀಸರ ಕಾರ್ಯಚರಣೆ : ಮನೆಗಳ್ಳನ ಬಂಧನ, 14.5 ಗ್ರಾಂ ಚಿನ್ನ, ಬೆಳ್ಳಿ, ಮೊಬೈಲ್ ವಶಕ್ಕೆ
ಬೆಳಗಾವಿ, ಫೆ, 10: ಮನೆ ಕಳ್ಳತನ ಮಾಡುತ್ತಿದ್ದ ಖದೀಮನೋರ್ವನನ್ನು ಬಂಧಿಸಿರುವ ಜಿಲ್ಲೆಯ ಗೋಕಾಕ ಪಟ್ಟಣದ ಪೊಲೀಸರು ಬಂಧಿತ ಆರೋಪಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರ ಹಾಗೂ ಮೊಬೈಲ್ ಸೇರಿ ಕೆಲವು ಸಾಮಗ್ರಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಹಾದೇವ ಮಾರುತಿ ಮುನವಳ್ಳಿ (47) ಮಹಾಲಿಂಗೇಶ್ವರ ನಗರ ಗೋಕಾಕ. ಈತ ಈ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದಾರೆ. ಇತ್ತಿಚೇಗೆ ಗೋಕಾಕ್ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆದಿದ್ದವು. ಇದಕ್ಕೆ ಸಂಬಂಧಿಸಿದಂತೆ ಗೋಕಾಕ್ ಶಹರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಈ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಗೋಕಾಕ ಪೊಲೀಸರು ಆರೋಪಿ ಓರ್ವನನ್ನು ಬಂಧಿಸಿದ್ದು, ಆತನಿಂದ 14.5 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 2 ಮೊಬೈಲಗಳು ಸೇರಿ 1.02 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್ ಪಿ ವೇಣುಗೋಪಾಲ ಅವರು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.