ಅಂತರರಾಷ್ಟ್ರೀಯ

Omicron Scare: ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

Omicron Scare: ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

ಜೋಹಾನ್ಸ್‌ಬರ್ಗ್: ಡಿ. 03: ಒಮಿಕ್ರಾನ್ ರೂಪಾಂತರಿ ದೇಶದಾದ್ಯಂತ ವ್ಯಾಪಿಸಿದ ಬೆನ್ನಲೆ ಚಿಕ್ಕ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಶುಕ್ರವಾರ ಹೇಳಿದ್ದಾರೆ.

ಹೊಸ ಕೋವಿಡ್ ರೂಪಾಂತರಿ ಒಮಿಕ್ರಾನ್​ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದು, ಈ ಸೋಂಕು ಹಿಂದಿನ ಅಲೆಗಳಿಗಿಂತ ವೇಗವಾಗಿ ಹರಡಲಿದೆ ಎಂದು ತಜ್ಞರು ಸೂಚಿಸಿದ್ದಾರೆ.

ಮೊದಲು ಈ ಸೋಂಕು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತಗುಲಿದ್ದು, ನಂತರ ಯುವಕರಲ್ಲಿ ವೇಗವಾಗಿ ಹರಡಿದೆ. ಅವರಿಂದ ವಯಸ್ಸಾದವರಿಗೆ ಹರಡುವ ಸಾಧ್ಯತೆ ಇದೆ.

ಆದರೆ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ಐದು ವರ್ಷದೊಳಗಿನ ಮಕ್ಕಳು ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದಿದ್ದಾರೆ. ಜೊತೆಗೆ 10-14 ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕೊರೊನಾ ಕಂಡುಬರುತ್ತಿದೆ.

ಎಲ್ಲಾ ವಯೋಮಾನದವರಿಗಿಂತ ವಿಶೇಷವಾಗಿ ಐದು ವರ್ಷದೊಳಗಿನವರಲ್ಲಿ ಸಾಕಷ್ಟು ಹೆಚ್ಚಳವನ್ನು ಕಂಡಿದ್ದೇವೆ ಎಂದು ಆಸ್ಪತ್ರೆಯನ್ನು ಉಲ್ಲೇಖಿಸಿ 

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್‌ನ ವಸ್ಸಿಲಾ ಜಸ್ಸಾತ್ ಹೇಳಿದ್ದಾರೆ.

ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡುಬರುತ್ತಿರಲು ವಿಜ್ಞಾನಿಗಳು ಹಲವಾರು ಸಂಭವನೀಯ ಕಾರಣಗಳನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 12 ವರ್ಷದೊಳಗಿನ ಮಕ್ಕಳು ಇನ್ನೂ ಲಸಿಕೆಗಳಿಗೆ ಅರ್ಹರಾಗಿಲ್ಲ ಎಂಬುದು ಒಂದು. ಕೊರೊನಾ ಬಂದಿರುವ ಮಕ್ಕಳ ಪೋಷಕರು ಲಸಿಕೆ ಹಾಕಿಸಿಕೊಂಡಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ದೇಶವು ಗುರುವಾರ 11,535 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಹೆಚ್ಚು ಪ್ರಕರಣಗಳು ಗೌಟೆಂಗ್‌ನಲ್ಲಿ ಪತ್ತೆಯಾಗಿವೆ.

ಸುದ್ದಿ ಓದಿ