ಒಲಿಂಪಿಕ್ಸ್ – 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ
ನವದೆಹಲಿ/ಟೋಕಿಯೋ, ಜುಲೈ 18 :- ಭಾರತದ 54 ಅಥ್ಲೀಟ್‍ಗಳು ಸೇರಿದಂತೆ 88 ಕ್ರೀಡಾಪಟುಗಳ ತಂಡ ಟೋಕಿಯೋನ ನರಿತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವರ ತಲುಪಿದೆ ಎಂದು ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ತಿಳಿಸಿದೆ.
ಶನಿವಾರ ರಾತ್ರಿ, ಬಿಲ್ಲುಗಾರಿಕೆ, ಬ್ಯಾಡ್‍ಮಿಂಟನ್, ಹಾಕಿ, ಜೂಡೋ, ಈಜು, ಭಾರ ಎತ್ತುವಿಕೆ, ಜಿಮ್ನಾಸ್ಟಿಕ್ಸ್ ಮತ್ತು ಟೇಬಲ್ ಟೆನ್ನೀಸ್ ಒಳಗೊಂಡ 8 ಕ್ರೀಡಾ ವಿಭಾಗಗಳ ಅಥ್ಲೀಟ್ ಗಳು ಮತ್ತು ನೆರವಿನ ಸಿಬ್ಬಂದಿ ಟೋಕಿಯೋಗೆ ತೆರಳಿದ್ದಾರೆ.
127 ಅಥ್ಲೀಟ್ ಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಬಾರಿಗೆ ಅತಿಹೆಚ್ಚು ಕ್ರೀಡಾ ಪಟುಗಳನ್ನು ಪ್ರತಿನಿಧಿಸುತ್ತಿದೆ.
ಈ ತಂಡವನ್ನು ಶನಿವಾರ ಸಂಜೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಇದೇ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಬೀಳ್ಕೊಟ್ಟರು.
ಟೋಕಿಯೋ ಒಲಿಂಪಿಕ್ಸ್ ಈ ತಿಂಗಳ 23ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ.