ಅಂಬಾಭವಾನಿ ದೇವಿಗೆ ಗರಿಗರಿ ನೋಟಿನ ಅಲಂಕಾರ ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರ ಸಾಗರ
Note decoration of Goddess Ambabhavani
ರಾಣೇಬೆನ್ನೂರು 27: ದಸರಾ ಹಬ್ಬದ ಪ್ರಯುಕ್ತ ನಗರದ ದೊಡ್ಡಪೇಟೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿಗೆ ಲಕ್ಷಾಂತರ ಮೌಲ್ಯದ ವಿವಿಧ ನೋಟುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿಯೂ ವಿಶೇಷ ರೀತಿಯಲ್ಲಿ ದೇವರಿಗೆ ಅಲಂಕಾರ ಮಾಡಲಾಗುತ್ತದೆ. ಈ ಬಾರಿ 41ನೇ ವರ್ಷದ ದಸರಾ ಮಹೋತ್ಸವ ಅಂಗವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಶಕ್ತಿ ಸಂಘಟನೆಯ 20ಯುವಕರು ಮಹಾಲಕ್ಷ್ಮೀ ಅಲಂಕಾರಕ್ಕೆ ಶ್ರಮವಹಿಸಿದ್ದಾರೆ. ಈ ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಭಕ್ತರು ಮುಗಿ ಬಿದ್ದಿದ್ದಾರೆ.ಯಾವೆಲ್ಲಾ ನೋಟು ಬಳಕೆ 50ರೂ, 100ರೂ, 200ರೂ ಹಾಗೂ 500ರೂ, ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ. ವಿವಿಧ ಬಣ್ಣಗಳನ್ನು ಹೊಂದಿದ ನೋಟುಗಳನ್ನು ಬಳಕೆ ಮಾಡಲಾಗಿದೆ. ದೇವಿಯ ಗರ್ಭಗುಡಿ ದ್ವಾರ ಬಾಗಿಲಿಗೆ, ಮೇಲ್ಛಾವಣೆಯಲ್ಲಿ ಹೂವಿನ ಅಲಂಕಾರ ರೀತಿ ನೋಟಿನ ಹೊದಿಕೆಯನ್ನು ನಿರ್ಮಿಸಲಾಗಿದ್ದು, ದೇವರ ವಿಗ್ರಹ ಹಿಂಭಾಗ, ಮುಂಭಾಗ ಸುತ್ತ ಅಲಂಕಾರ ಮಾಡಲಾಗಿದೆ. ನೋಟುಗಳಲೇ ಹೂಗಳ ಚಿತ್ತಾರ ಅರಳಿಸಲಾಗಿದೆ.
ನವರಾತ್ರಿ ವಿಶೇಷವಾಗಿ ಮಾಡಿದ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿತು.ಈ ಅಲಂಕಾರಕ್ಕಾಗಿ ಲಕ್ಷಾಂತರ ರೂ ಹಣವನ್ನು ಬಳಸಲಾಗಿದೆ. ಈ ವಿಶೇಷ ಅಲಂಕಾರ ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 