ಎಸ್. ರಾಜೇಂದ್ರನ್ರಿಗೆ ಸನ್ಮಾನ
Felicitation to S. Rajendran
ಲೋಕದರ್ಶನ ವರದಿ
ಬೆಟಗೇರಿ 31 : ರೇಲ್ವೆ ಇಲಾಖೆಯಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿಗೊಳ್ಳುತ್ತಿರುವ ಗದಗ ರೈಲು ನಿಲ್ದಾಣದ ಚೀಫ್ ರಿರ್ಜರ್ವೇಶನ್ ಸುಪ್ರಿಂಟೆಂಟ್ ಎಸ್. ರೇಜೇಂದ್ರ ಹಾಗೂ ಅವರ ಧರ್ಮಪತ್ನಿ ಎಸ್. ತ್ರಿವೇಣಿ ಅವರಿಗೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಪರವಾಗಿ ಅವರ ಮನೆಗೆ ತೆರಳಿ ರಾಜೇಂದ್ರನ್ ಅವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಫಲಪುಷ್ಪ ನೀಡಿ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅವರು ಮಾತನಾಡಿ ಎಸ್. ರಾಜೇಂದ್ರನ್ ಅವರು ತಮ್ಮ ಸೇವಾ ಅವಧಿಯಲ್ಲಿ ಬಹಳಷ್ಟು ಪ್ರಯಾಣಿಕರಿಗೆ ರಿರ್ಜವೇಶರ್ನ ಮಾಡಿಕೊಡುವಲ್ಲಿ ಶ್ರಮಿಸಿದ್ದಾರೆ. ಅವರ ಸಹಕಾರದಿಂದ ಯಾತ್ರಿಗಳಿಗೆ ತೆರಳುಲು ಅನುಕೂಲವಾಗಿದೆ ಎಂದು ಅದಕ್ಕಾಗಿ ಅವರು ಜನಪ್ರೀಯತೆ ಹೊಂದಿದ್ದಕ್ಕಾಗಿ ಇಂದು ನಮ್ಮ ಸಮಿತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗಿದೆ ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಂದ್ರನ್ ಅವರು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪ್ರೋತ್ಸಾಹ ನಾನು ಎಂದಿಗೂ ಮರೆಯುವುದಿಲ್ಲ ನನ್ನ ಅಲ್ಪ ಸೇವೆ ಗುರುತಿಸಿ ಈ ಸಮಿತಿಯವರು ನಮ್ಮ ಮನೆಯವರೆಗೆ ಬಂದು ಸನ್ಮಾನಿಸಿದ್ದಕ್ಕೆ ಅವರಿಗೆ ಅಭಿನಂದಿಸುತ್ತೇನೆ
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ, ಎಸ್. ತ್ರಿವೇಣಿ, ಆಂಜನೇಯ ಗುಂತಕಲ್ಲ, ಮನಸ್ಸೂಖಲಾಲ ಪುಣೇಕರ, ಈರಣ್ಣ ಜ್ಯೋತಿ, ಅರ್ಜುನಸಾ ಮೇರವಾಡೆ, ಎಂ.ಟಿ. ಕಬ್ಬಿಣ, ಅಶೋಕ ಅಂಗಡಿ, ಜಂಬಣ್ಣ ಹುಡೇದ, ಬಾಗಲಕೋಟ ಮುಂತಾದವರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 