ರಾಜ್ಯದ ಅತ್ಯುತ್ತಮ ಪೊಲೀಸ ಠಾಣಿಯಾಗಿ ನಿಪ್ಪಾಣಿ ಗ್ರಾಮೀಣ ಠಾಣೆ ಆಯ್ಕೆ : ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಜಿಲ್ಲೆ

ರಾಜ್ಯದ ಅತ್ಯುತ್ತಮ ಪೊಲೀಸ ಠಾಣಿಯಾಗಿ ನಿಪ್ಪಾಣಿ ಗ್ರಾಮೀಣ ಠಾಣೆ ಆಯ್ಕೆ : ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಜಿಲ್ಲೆ

ಬೆಳಗಾವಿ : ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯು 2022ನೇ ಸಾಲಿನ ಕರ್ನಾಟಕದ ಅತ್ಯುತ್ತಮ ಪೆÇಲೀಸ್ ಠಾಣಿಯನ್ನಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ ಠಾಣೆಯನ್ನು ಆಯ್ಕೆ ಮಾಡಿದೆ.


    ಬೆಳಗಾವಿ ಜಿಲ್ಲೆಯ ಕಿತ್ತೂರು ಪೆÇಲೀಸ್ ಠಾಣೆ ಮತ್ತು ನಿಪ್ಪಾಣಿ ಗ್ರಾಮೀಣ ಪೆÇಲೀಸ್ ಠಾಣೆಗೆ ಭಾರತ ಸರ್ಕಾರ ಕೇಂದ್ರ ಗೃಹ ಮಂತ್ರಾಲಯ ದೆಹಲಿ ರವರ ಸಲಹಾ ಸಂಸ್ಥೆಯ ತಂಡವು ನಿಪ್ಪಾಣಿ ಗ್ರಾಮೀಣ ಠಾಣೆಯ ಮೌಲ್ಯಮಾಪನ ಕಾರ್ಯ ಕೈಗೊಂಡಿತ್ತು. ಈ ತಂಡವು ಠಾಣೆಯ ಒಳಾಂಗಣ, ಹೊರಾಂಗಣ ಸ್ವಚ್ಛತೆ, ಪೆÇಲೀಸ್ ಠಾಣೆಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಕಾಂಪೌಂಡ ವ್ಯವಸ್ಥೆ, ಪೆÇಲೀಸ್ ಠಾಣೆ ಕಟ್ಟಡ, ಲಾಕ್ ಅಪ್ ಕೊಣಿ, ಸಿಬ್ಬಂದಿಗಳಿಗೆ ವಿಶ್ರಾಂತಿ ಸ್ಥಳ, ಮಹಿಳಾ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ, ದಾಖಲಾತಿಗಳ ಸಂಗ್ರಹಣೆ, ಪೆÇಲೀಸ್ ಠಾಣೆಯ ಸುರಕ್ಷತೆ, ಭದ್ರತೆ, ಶೌಚಾಲಯಗಳ ವ್ಯವಸ್ಥೆ, ಅಪರಾಧ ಪ್ರಕಣಗಳು, ತನಿಖಾ ವಿಧಾನ, ಅಪರಾಧ ಪತ್ತೆ ಕಾರ್ಯ ವಿಧಾನ, ಹಳೆಯ ಪ್ರಕಣಗಳ ವಿಲೇವಾರಿ, ಪ್ರಕಣಗಳಲ್ಲಿ ಶಿಕ್ಷೆ, ಕಾನುನು-ಸುವ್ಯವಸ್ಥೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮೌಲ್ಯಮಾಪನ ಮಾಡಲಾಗಿತ್ತು.  


    ಅದರಂತೆ ಪೆÇಲೀಸ್ ಠಾಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ, ಪೆÇಲೀಸ್ ಲಭ್ಯತೆ, ನಡವಳಿಕೆ, ದೂರುದಾರರ ಬಗ್ಗೆ ಕಾಳಜಿ, ಜಾತಿ, ಧರ್ಮ, ಅಂಗತಾರತಮ್ಯ ಹೀಗೆ ಮುಂತಾದ ವಿಷಯಗಳ ಕುರಿತು ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಸಲಹಾ ಸಂಸ್ಥೆಯ ತಂಡದಿಂದ ಭೇಟಿ ನೀಡಿ, ಪೆÇಲೀಸ್ ಠಾಣೆಯ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಮೌಲ್ಯಮಾಪನ ಮಾಡಲಾಯಿತು ಅಲ್ಲದೆ ಠಾಣಾಧಿಕಾರಿಗಳಿಗೆ ಸುಮಾರು 200ರಿಂದ 250 ಪ್ರಶ್ನಾವಳಿಯ ಮೂಲಕ ಮೌಲ್ಯಪಾನ ಮಾಡಲಾಯಿತು. ಈ ತಂಡವು ದೇಶದ ವಿವಿಧ ಪೆÇಲೀಸ್ ಠಾಣೆಗಳ ಮೌಲ್ಯಮಾಪನ ಮಾಡಿ, ಕೊನಗೆ 2022ನೇ ಸಾಲೀನ ಕರ್ನಾಟಕದ ಅತ್ಯುತ್ತಮ ಪೆÇಲೀಸ್ ಠಾಣೆ ಅಂತಾ ನಿಪ್ಪಾಣಿಯ ಗ್ರಾಮೀಣ ಠಾಣೆ ಆಯ್ಕೆಯಾಗಿದೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

    ಈ ಯಶಸ್ವಿಗೆ ಕಾರಣರಾದ ಚಿಕ್ಕೋಡಿ ಡಿಎಸ್‍ಪಿ ಬಸವರಾಜ ಯಲಿಗಾರ, ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಸಿಪಿಐ ಗ್ರಾಮೀಣ ಠಾಣೆಯ ಪಿಎಸ್‍ಐ ಅನಿಲ ಕುಂಬಾರ ಹಾಗೂ ಎಲ್ಲ ಸಿಬ್ಬಂದಿ ಜನರ ಕೊಡುಗೆಯನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್‍ಪಿ ವೇಣುಗೋಪಾಲ ಅಭಿನಂಧಿಸಿದ್ದಾರೆ.

ಸುದ್ದಿ ಓದಿ