ಮೂಡಲಗಿ

ನಿಂಗಪ್ಪ ಸೋನವಾಲಕರ್ ಸ್ಮರಣಾರ್ಥ ಕಣ್ಣಿನ ತಪಾಸಣೆ

ನಿಂಗಪ್ಪ ಸೋನವಾಲಕರ್ ಸ್ಮರಣಾರ್ಥ ಕಣ್ಣಿನ ತಪಾಸಣೆ

ಮೂಡಲಗಿ 12: ಇಲ್ಲಿನ ಪ್ರತಿಷ್ಠಿತ ಶ್ರೀನಿವಾಸ ಸ್ಕೂಲ್‍ನಲ್ಲಿ ಎಪ್ರಿಲ್ 10ನೇ ದಿನಾಂಕದಂದು ದಿವಂಗತ ನಿಂಗಪ್ಪ ರ. ಸೋನವಾಲಕರ್ ಇವರ ಸ್ಮರಣಾರ್ಥ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿತ್ತು. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಹಾಗೂ ಬಿಎಲ್‍ಡಿಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಉದ್ಘಾಟಿಸಿದರು. ಡಾ. ಕೀರ್ತಿ ವಾಲಿ ಕಣ್ಣುಗಳ ಮಹತ್ವದ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ. ರಂಗಣ್ಣ ನಿಂ. ಸೋನವಾಲಕರ್, ಡಾ. ರೇಣುಕಾ ಸೋನವಾಲ್ಕರ್, ಡಾ. ಮರ್ವಿನ್, ಡಾ ವೀಣಾ, ಉದಯ, ಚಂದ್ರಕಾಂತ,  ಕಾರ್ಯದರ್ಶಿ ವೆಂಕಟೇಶ ಪಾಟೀಲ ಹಾಗೂ ಪ್ರಾಚಾರ್ಯ ಮನೋಜ ಭಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿದ್ಯಾರ್ಥಿನಿಯರಾದ ಶ್ರದ್ಧಾ ಹಾಗೂ ಪವಿತ್ರಾ ಪ್ರಾರ್ಥನಾ ಗೀತೆ ಹಾಡಿದರು. ಡಾ. ರಂಗಣ್ಣ ಸ್ವಾಗತಿಸಿದರು. ವೆಂಕಟೇಶ ಪಾಟೀಲ ವಂದಿಸಿದರು. ವಿದ್ಯಾ ಹೆಗಡೆ ನಿರೂಪಿಸಿದರು. 300ಕ್ಕೂ ಅಧಿಕ ಶಿಬಿರಾರ್ಥಿಗಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. 139 ಜನರು ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.


ಸುದ್ದಿ ಓದಿ