ಅಂತರರಾಷ್ಟ್ರೀಯ

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

ವಾಷಿಂಗ್ಟನ್ , ನ 30: ದಕ್ಷಿಣ  ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ  ಒಮಿಕ್ರಾನ್ ಕೋವಿಡ್  ಹೊಸ ತಳಿಯ ಜನತೆ ಭಯ  ಪಡಬೇಕಿಲ್ಲ   ಎಂದು ಅಮೆರಿಕದ ಜೋ ಬೈಡೆನ್  ಜನತೆಗೆ ಭರವಸೆಯ ಮಾತು ಹೇಳಿದ್ದಾರೆ. 

ಆದರೆ ಹೊಸ ತಳಿಯ ಬಗ್ಗೆ ಮತ್ತು ಅದು ಉಂಟು ಮಾಡಬಹುದಾದ  ಕೆಟ್ಟ ಪರಿಣಾಮಗಳ ಬಗ್ಗೆ ಜನತೆ ಬಹಳ  ಜಾಗರೂಕರಾಗಿರಬೇಕು ಎಂದೂ  ಮನವಿ ಮಾಡಿದ್ದಾರೆ . 

ಹೊಸ ತಳಿಯ ಬಗ್ಗೆ, ಜಗತ್ತನ್ನು ಎಚ್ಚರಿಸಿದ ದ ಆಫ್ರಿಕಾ ವಿಜ್ಞಾನಿಗಳ ಸಮುದಾಯವನ್ನು ಮತ್ತು ಅವರ ಪಾತ್ರವನ್ನು ಜೋ ಬೈಡನ್ ಪ್ರಶಂಸಿದ್ದಾರೆ. ಈ ರೀತಿ ಮುನ್ನೆಚ್ಚರಿಕೆ ನೀಡಿರುವುದರಿಂದ, ದೇಶಗಳು ಹೊಸ ತಳಿಯನ್ನು ಮತ್ತು ಅದರ  ಪರಿಣಾಮಗಳನ್ನು ಎದುರಿಸಲು ಸಹಕಾರಿಯಾಗಲಿದೆ  ಎಂದು ಅವರು  ಹೇಳಿದ್ದಾರೆ.  

ಆದರೂ ದೇಶದ ಜನತೆ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ  ಪಡೆಯುವುದು ಮತ್ತು ಮಾಸ್ ಧಾರಣೆ, ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಎಚ್ಚರಿಕೆ ವಹಿಸುವಂತೆಯೂ  ಜನರಿಗೆ ಕಿವಿಮಾತು ಹೇಳಿದ್ದಾರೆ

ಸುದ್ದಿ ಓದಿ