ಲೇಖನಗಳು

ಕೈಲಾಗದೆಂಬ ನಕಾರಾತ್ಮಕ ಭಾವ ತೊಲಗಲಿ...

ಕೈಲಾಗದೆಂಬ ನಕಾರಾತ್ಮಕ ಭಾವ ತೊಲಗಲಿ...

ಆಂಗ್ಲ ಸಾಹಿತಿ ನೆಪೋಲಿಯನ್ ಹಿಲ್ "ಜೀವನದಲ್ಲಿ ಬಂದೆರಗುವ ಪ್ರತಿಯೊಂದು ಸಮಸ್ಯೆ ಅಥವಾ ಅಡ್ಡಿ-ಅಡಚಣೆಗಳು ನಮ್ಮನ್ನು ಪರಿಕ್ಷೀಸಲು ಬರುತ್ತವೆ. ಅವೆಲ್ಲವುಗಳನ್ನು ನಾವು ದೃಢವಾದ ಮನಸ್ಸಿನಿಂದ ಮತ್ತು ಸಮರ್ಥವಾಗಿ ಎದುರಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಮುನ್ನಡೆದರೆ ಒಳ್ಳೆಯ ಅವಕಾಶಗಳು ತಾನಾಗಿಯೇ ಬರುತ್ತವೆ"ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಸಾಮಾನ್ಯವಾಗಿ ಬಹುತೇಕ ಜನರು ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ನನಗೆ ಯರೂ ಮಾರ್ಗದರ್ಶನ ಮಾಡುವುದಿಲ್ಲ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದೆನೆ, ಇಂಗ್ಲೀಷ್ ಕಠಿಣವಾಗುತ್ತಿದೆ,  ಅದು ನನಗೆ ಸಾಧ್ಯವಿಲ್ಲ, ನನ್ನಿಂದ ಆಗದು ಎಂಬಂತಹ ನಕಾರಾತ್ಮಕ ಮನೋಭಾವಗಳು ಅಧೈರ್ಯಗೊಳಿಸಿ ಯಾವುದೇ ಪ್ರಯತ್ನಕ್ಕೆ ಅಣಿಗೊಳಿಸದೆ ನಮ್ಮನ್ನು ನಿರಾಶಾವಾದಿಯನ್ನಾಗಿ ಮಾಡುತ್ತವೆ ಮತ್ತು ಸಾಧನೆಗೆ ಅಡ್ಡಿಯಾಗುತ್ತವೆ. 

ಆದ್ದರಿಂದ ನಮ್ಮೊಳಗೆ ಏನಿದೆ ಎನ್ನುವುದು ಮುಖ್ಯ. ನಾವು ಯಾವುದಾದರೂ ಸಾಧನೆಯನ್ನು ತೋರಲು ಅಥವಾ ಗುರಿ ಮುಟ್ಟಲು ಕಾರಣವಾಗುವ ಸಂಗತಿಯೆಂದರೆ ನಮ್ಮ ಮನೋಭಾವ. ಆದ್ದರಿಂದ ನಿಮ್ಮ ಜೀವನದ ಬಗ್ಗೆ ನೀವು ಹೊಂದಿರುವ ಮನೋಭಾವ, ಗುರಿ ಸಾಧನೆಯ ಬಗೆಗೆ ನಿಮ್ಮಲ್ಲಿರುವ ಜ್ಞಾನ, ಪ್ರತಿಭೆ, ಬುದ್ದಿಮತ್ತೆ, ಪಾಂಡಿತ್ಯ ಮತ್ತು ಶಕ್ತಿ-ಸಾಮಥ್ರ್ಯಗಳ ಬಗ್ಗೆ ಸ್ಪಷ್ಟತೆ ಮತ್ತು ಅರಿವು, ಅಲೋಚನೆ, ಸಕಾರಾತ್ಮಕ ಚಿಂತನೆ, ಇಡಬೇಕಾದ ದೃಢವಾದ ಹೆಜ್ಜೆಗಳು, ಅದಕ್ಕಾಗಿ ಮಾಡಿಕೊಳ್ಳುವ ಸಿದ್ದತೆ, ರೂಪರೇಷ, ತಯಾರಿ ಮತ್ತು ಹಾಕಿಕೊಳ್ಳುವ ಯೋಜನೆಗಳು ಅಷ್ಟೇ ಮುಖ್ಯವಾಗಿರುತ್ತವೆ. ಆದ್ದರಿಂದ ಯಾವನು ಬದುಕಿನಲ್ಲಿ ಆಶಾವಾದಿಯಾಗಿ ಮತ್ತು ಧನಾತ್ಮಕವಾಗಿ ಯೋಚಿಸುವವನೋ ಅವನು ಸದಾ ಯಸಸ್ಸಿನ ಮೇಟ್ಟಿಲೇರುತ್ತಾನೆ. 

ಕೈಲ್ ಮೈನಾಡರ್್ರವರ ಯಶೋಗಾಥೆ ನಮಗೆಲ್ಲ ಪ್ರೇರಣೆಯಾಗಲಿ: ಯಾವುದೋ ಆರೋಗ್ಯ ಸಮಸ್ಯೆಯಿಂದಲೋ ಅಥವಾ ವಿಧಿಯ ಆಟವೇನೋ ಗೊತ್ತಿಲ್ಲ ನೋಡಲು ಸದೃಢನಾಗಿದ್ದ ಒಬ್ಬ ವ್ಯಕ್ತಿ ಬಾಲ್ಯದಲ್ಲಿಯೇ ತನ್ನ ಎರಡು ಕೈ ಹಾಗೂ ಕಾಲುಗಳನ್ನು ಕಳೆದುಕೊಂಡ. ಆದರೆ ಆತ ತನ್ನ  ಹುಮ್ಮಸ್ಸು, ಉತ್ಸಾಹ, ಏನನ್ನಾದರೂ ಸಾಧಿಸಬೇಕೆಂಬ ಮಹೋನ್ನತವಾದ ಗುರಿ ಮತ್ತು ಮಹತ್ವಾಕಾಂಕ್ಷೆ, ಸ್ಪಧರ್ಾ ಮನೋಭಾವ ಮತ್ತು ಎದುರಾಗುವ ಸಮಸ್ಯೆಗಳನ್ನು ಸವಾಲನ್ನಾಗಿ ಸ್ವೀಕರಿಸಿ, ಜೀವನದಲ್ಲಿ ಏನೇ ಬರಲಿ ಅದನ್ನು ಎದುರಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಬೆಟ್ಟ-ಗುಡ್ಡ ಹತ್ತುವುದು, ಪರ್ವತ ಆರೋಹಣ ಮತ್ತು ಇನ್ನಿತರ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ತನ್ನಲ್ಲಿರುವ ಶಕ್ತಿ-ಸಾಮಥ್ರ್ಯಗಳನ್ನು ಓರೆಗಲ್ಲಿಗೆ ಹಚ್ಚುತ್ತಿದ್ದ. ಎಲ್ಲ ಇದ್ದವರು ಇದು ನಮಗೆ ಆಗುವುದಿಲ್ಲ, ನನಗೆ ಸಾಧ್ಯವಿಲ್ಲ, ಅಸಾಧ್ಯ ಮತ್ತು ಕೈಲಾಗದೆಂಬ ಎಂಬಂತಹ ನಕಾರಾತ್ಮಕ ಮನೋಭಾವನೆ ಹೊಂದಿದವರಿಗೆಲ್ಲ ಶ್ರೇಷ್ಠ ಸಾಧನೆಗೈದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ. ಹಲವು ಸಾಹಸ ಕ್ರೀಡಾಸ್ಪಧರ್ೆಯಲ್ಲಿ ಧನಾತ್ಮವಾಗಿ ಭಾಗವಹಿಸಿ ದೈಹಿಕವಾಗಿ ಸದೃಢವಾಗಿದ್ದರೆಲ್ಲರನ್ನು ಮೀರಿಸುವಂತೆ ಸಾಧನೆ ತೋರುತ್ತಿದ್ದನು. ಆತನು ಕೈ-ಕಾಲುಗಳಿಲ್ಲದೇ ಸಂಪೂರ್ಣವಾಗಿ ಅಂಗವಿಕಲತೆಯನ್ನು ಹೊಂದಿದ್ದರೂ ಈ ವ್ಯಕ್ತಿಯು 20,000 ಅಡಿ ಎತ್ತರದ ಕಿಲಿಮಂಜಾರೋ ಎಂಬ ಪರ್ವತವನ್ನು ಯಾವುದೇ ವಿಶೇಷ ಉಪಕರಣ ಮತ್ತು ಯಾರ ಸಹಾಯವಿಲ್ಲದೇ ಏಕಾಂಗಿಯಾಗಿ ಪರ್ವತಾರೋಹಣ ಮಾಡಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. 

ಕಿಲಿಮಂಜಾರೋ ಎಂಬ ಪರ್ವತವನ್ನು ಏರಿದ ಮೊದಲ ಕಾಲಿಲ್ಲದ ವ್ಯಕಿಯೆಂಬ ದಾಖಲೆ ಮಾಡಿ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಇವರು ನೋ ಎಕ್ಸಕ್ಯೂಸ್ ಕ್ರಾಸ್ ಫಿಟ್ಜಿಮ್ ಪ್ರಾರಂಭಿಸಿ ಅನೇಕ ಕುಸ್ತಿ ಮತ್ತು ದೇಹದಾಢ್ರ್ಯ ಪಟುಗಳಿಗೆ ಕೋಚ ಆಗಿ ಕಾರ್ಯನಿರ್ವಹಿಸಿದ್ದಾರೆ. ದೇವರು ನಮಗೆ ಏನೆಲ್ಲ ದೈಹಿಕ, ಮಾನಸಿಕ, ಬೌದ್ಧಿಕ ಸದೃಡತೆ ಮತ್ತು ಶಕ್ತಿ-ಸಾಮಥ್ರ್ಯವನ್ನು ದಯಪಾಲಿಸಿದ್ದರೂ ನನ್ನಿಂದ ಇದು ಸಾಧ್ಯವಿಲ್ಲ, ಬಹಳ ಕಠಿಣವಾಗಿದೆ ಮತ್ತು ಇದು ನಮ್ಮಂಥವರಿಗೆ ಅಸಾಧ್ಯವೆಂಬ ಸದಾ ನಕಾರಾತ್ಮಕ ಅಂಶಗಳೊಂದಿಗೆ ವೃಥಾ ಕಾಲಹರಣ ಮಾಡುವವರಿಗೆ ಉತ್ತಮ ಸ್ಪೂತರ್ಿ ಮತ್ತು ಪ್ರೇರಣೆಯೆಂದರೆ ಅವರೇ ಕೈಲ್ ಮೇನಾಡರ್್ರವರು. 

ಇವರು ತಮ್ಮ ಜೀವನದಲ್ಲಿ ಯಾವಾಗಲೂ ಕಾರ್ಯದಲ್ಲಿ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಿಯೇ ತೀರುತ್ತೇನೆಂಬ ಅಚಲ ನಂಬಿಕೆಯೇ ಇವರ ಯಶಸ್ಸಿನ ರಹಸ್ಯ. ಇವರು ಜನಸಾಮಾನ್ಯರಿಗೆ ಯಾವಾಗಲೂ ಹೇಳುವುದಿಷ್ಟೇ "ಪರಿಶ್ರಮ ವಹಿಸಿ ದುಡಿಯುವ ಮನಸ್ಸು, ನನ್ನಲ್ಲಿರುವ ಶಕ್ತಿ-ಸಾಮಥ್ರ್ಯದ ಬಗ್ಗೆ ಅರಿವು, ಇದು ನನ್ನಿಂದ ಮಾತ್ರ ಸಾಧ್ಯ, ನಾನು ಮಾಡಬಲ್ಲೆ, ಹಿಡಿದ ಕಾರ್ಯವ ಬಿಡದೇ ಸಾಧಿಸಿಯೇ ಸಿದ್ದ" ಎಂಬ ಧನಾತ್ಮಕ ಆಲೋಚನೆಗಳೊಂದಿಗೆ ಮುನ್ನುಗ್ಗಿದರೆ ನಿಮಗೆ ಖಂಡಿತವಾಗಿ ಜಯ ದೊರೆಯುತ್ತದೆ ಎಂಬುದು ಇವರ ಅಂಬೋಣ. 

ಆದ್ದರಿಂದ ನಮ್ಮ ಮನೋಭಾವವು ನಕಾರಾತ್ಮಕವಾಗಿದ್ದರೆ ಅದು ನಮ್ಮ ಜೀವನವನ್ನು ಸೀಮಿತಗೊಳಿಸುತ್ತದೆ. ನಾವು ಮಾಡಬೇಕಾದ ಕೆಲಸ-ಕಾರ್ಯಗಳು ಈಡೇರಿಕೆ ಅಥವಾ ಕಾರ್ಯಸಾಧನೆಯು ನಮ್ಮಲ್ಲಿರುವ ಮನಸ್ಸಿನ ಸ್ಥಿತಿ, ದೃಷ್ಟಿಕೋನ ಮತ್ತು ಕಾರ್ಯದ ನೆರವೇರಿಕೆಯಲ್ಲಿನ ಆಲೋಚನೆ ಮತ್ತು ಮನೋಭಾವದಿಂದ ನಿಧರ್ಾರವಾಗುತ್ತದೆ. ನಾವೆಲ್ಲರೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರೆ ಅದಕ್ಕೆ ಮುಖ್ಯವಾಗಿ ನಾವು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಆ ಕಾರ್ಯದ ನೆರವೇರಿಕೆಯ ಬಗ್ಗೆ ಸದಾ ಆಲೋಚಿಸುತ್ತಾ ಏಕಾಗ್ರತೆ, ಕಾರ್ಯದಲ್ಲಿ ಶ್ರದ್ಧೆ, ನಿಷ್ಠೆ, ಸಮಚಿತ್ತ, ಸತತ ಅಧ್ಯಯನ, ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ, ಕಾರ್ಯತತ್ಪರತೆ ಮತ್ತು ಆತ್ಮಸ್ಥೈರ್ಯದೊಂದಿಗೆ ಮುನ್ನಡೆದರೆ ಜಯ ನಮ್ಮದಾಗುತ್ತದೆ. ಹೀಗಾಗಿ ನಮ್ಮ ಮನೋಭಾವವೇ ಎಲ್ಲದಕ್ಕೂ ಕಾರಣವೆಂದು ಅರಿತು ನಾವೆಲ್ಲರೂ ಸಾಧನೆಯ ಪಯಣದಲ್ಲಿ ಅಥವಾ ಪ್ರತಿಯೊಂದು ಹೆಜ್ಜೆಯಲ್ಲಿ ನಾವು ಕಂಡ ಸೋಲು, ವೈಫಲ್ಯ ಮತ್ತು ಪಡೆದ ಅನುಭವಗಳೇ ನಮಗೆ ಮುಂದಿನ ನಿಧರ್ಾರಗಳನ್ನು ತೆಗೆದುಕೊಳ್ಳಲು ಮೈಲಿಗಲ್ಲುಗಳಾಗಿ ಭವಿಷ್ಯಕ್ಕೆ ದಾರಿದೀಪಗಳಾಗುತ್ತವೆ. 

ಕೊನೆಯ ಹನಿ: ಆದ್ದರಿಂದ ನಾವು ಯಾವಾಗಲೂ ಒಳ್ಳೆಯದರ ಬಗ್ಗೆ ಆಲೋಚನೆ ಮಾಡಬೇಕು. ನಮ್ಮ ಆಲೋಚನೆಗಳೇ ನಮ್ಮ ಭವಿಷ್ಯವನ್ನು ರೂಪಿಸಬಲ್ಲವು. ಕಾಲ-ಕಾಲಕ್ಕೆ ಮನೋಭಾವವನ್ನು ಬದಲಿಸದೇ ಸಕಾರಾತ್ಮಕ ಮನೋಭವವನ್ನು ಬೆಳೆಸಿಕೊಂಡು ಹಿಡಿದ ಕೆಲಸ-ಕಾರ್ಯವನ್ನು ಪೂರ್ಣಗೊಳಿಸುವವರೆಗೆ ನಿಶ್ಚಲವಾದ ಮನಸ್ಸಿನಿಂದ ಹೋರಾಡಿದಾಗ ಮನೋಭಾವವೇ ಯಶಸ್ಸಿನ ಅಡಿಗಲ್ಲು ಅಥವಾ ಸೋಪಾನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವು ಸಲ ನಾವು ಮಾಡುವ ಅಥವಾ ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ಯಾವುದೇ ಸೋಲು, ವೈಫಲ್ಯ, ಅಪಜಯ ಅಥವಾ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದೇ ಹೋದಾಗ ನಮ್ಮ ಸುತ್ತಮುತ್ತಲಿನ ಜನರುಕಾರ್ಯದ ಬಗ್ಗೆ ಏನು ಗೊತ್ತಿರದಿದ್ದರೂ ಸುಮ್ಮನೆ ಹೀಗೆ ಆಗಬಾರದಿತ್ತು, ಹಾಗೆ ಮಾಡಬಾರದಿತ್ತು, ಹೀಗೆ ಮಾಡಬೇಕಿತ್ತು, ಈ ನಿಧರ್ಾರ ತೆಗೆದುಕೊಳ್ಳಬೇಕಿತ್ತು ಹಾಗೂ ಅವನಿಂದ ಸಾಧ್ಯವಿಲ್ಲ, ಅದು ಆಗುವುದಿಲ್ಲ, ಅಸಾಧ್ಯ, ಮುಂದೇನು ಅಥವಾ ಮತ್ತೇನು ? ಎಂಬಂತಹ ಯಕ್ಷಪ್ರಶ್ನೆಗಳನ್ನು ಹಾಕುತ್ತಾ ತಮ್ಮ ಮನಸ್ಸಿಗೆ ಬಂದಂತೆ ಮಾತಾಡುತ್ತಾರೆ. ಇದರಿಂದ ನಮ್ಮಲ್ಲಿ ನಕಾರಾತ್ಮಕ ಮನೋಭಾವನೆಯನ್ನು ಬಿತ್ತುವಂತಹ ಸನ್ನಿವೇಶಗಳನ್ನು ನಿಮರ್ಾಣ ಮಾಡುತ್ತಾರೆ. ಡಿ.ವ್ಹಿ.ಜಿಯವರು ಹೇಳಿರುವಂತೆ, " ಬದುಕು ಕ್ರಿಕೆಟ್ ಇದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ ಅವರು ನಮ್ಮ ಸೋಲಿಗಾಗಿಯೇ ಕಾದು ಕುಳಿತಿರುತ್ತಾರೆ ಅನ್ನೋದು ಸತ್ಯ ಎಂಬ ಮಾತಿನಂತೆ ನಮ್ಮ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಜನ ನಾವು ಯಾವುದೇ ಗುರಿ ಸಾಧನೆಯ ಪಥದಲ್ಲಿ ಎಡವಿದರೆ ಆಗ ನಮ್ಮನ್ನು ಹುರುದುಂಬಿಸಿ, ಪ್ರೋತ್ಸಾಹಿಸುವುದಿಲ್ಲ. ಅದಕ್ಕೆ ಬದಲಾಗಿ ನಮ್ಮನ್ನು ಅಸ್ಥಿರಗೊಳಿಸಲು ಹಾಗೂ ನಮ್ಮಲ್ಲಿ ಋಣಾತ್ಮಕವಾದ ಭಾವನೆಗಳನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ನಾವು ದೃಢ ಮನಸ್ಸಿನಿಂದ ನಾನು ಏನು ಎಂಬುದು ನನಗೆ ಗೊತ್ತು, ನನ್ನಲ್ಲಿ ಏನೆಲ್ಲಾ ಶಕ್ತಿ-ಸಾಮಥ್ರ್ಯವಿದೆ ಎಂಬುದನ್ನು ಅರಿತು ನಮ್ಮ ದೃಷ್ಟಿಯನ್ನು ಕೇವಲ ಗುರಿಯ ಸಾಧನೆಯತ್ತ ನೆಟ್ಟಿರಬೇಕು. ಅಂತಹ ಟೀಕಾಕಾರರ ಮಾತಿಗೆ ಕಿವಿಗೊಡದೇ, ದೃತಿಗೆಡದೇ ಹಿಡಿದ ಕಾರ್ಯವನ್ನು ನೆರವೇರಿಸಿಯೇ ತೀರುತ್ತೇನೆಂಬ ಆತ್ಮಸ್ಥೈರ್ಯದೊಂದಿಗೆ ಮುನ್ನುಗ್ಗಿದರೆ ಯಶಸ್ಸು ಲಭಿಸುತ್ತದೆ.

- ಮಲ್ಲಪ್ಪ ಖೊದ್ನಾಪೂರ 

ತಿಕೋಟ 

ಸುದ್ದಿ ಓದಿ