ಅಂತರರಾಷ್ಟ್ರೀಯ

ನೇಪಾಳ ಪ್ರಧಾನಿ ದೇವುಬಾ ಅವರಿಂದ ಸಂಸತ್‍ನಲ್ಲಿಂದು ವಿಶ್ವಾಸಮತ ಯಾಚನೆ

ನೇಪಾಳ ಪ್ರಧಾನಿ ದೇವುಬಾ ಅವರಿಂದ ಸಂಸತ್‍ನಲ್ಲಿಂದು ವಿಶ್ವಾಸಮತ ಯಾಚನೆ

 

ಕಠ್ಮಂಡು, ಜುಲೈ 18: ನೇಪಾಳದಲ್ಲಿ ನೂತನವಾಗಿ ಆಯ್ಕೆಯಾಗಿರುವ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಭಾನುವಾರ ಸಂಸತ್ ನಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. 

 ಪ್ರತಿಪಕ್ಷ ಸಿಪಿಎನ್‍—ಯುಎಂಎಲ್‍ ನಲ್ಲಿ ಭಿನ್ನಾಭಿಪ್ರಾಯ ತಾರಕ್ಕೇರಿದಂತೆ ಹಾಗೂ ಜನತಾ ಸಮಾಜವಾದಿ ಪಕ್ಷ-ನೇಪಾಳದ ಎರಡು ಬಣಗಳ ನಡುವೆ ಸಮೀಕರಣ ನಿರಂತರವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ದೇವುಬಾ ಅವರು ಬಲಾಬಲ ಪರೀಕ್ಷೆಗೆ ಮುಂದಾಗಿದ್ದಾರೆ. 

 ನೇಪಾಳದ ಸಂವಿಧಾನದಂತೆ ಹೊಸದಾಗಿ ಆಯ್ಕೆಯಾದ ಪ್ರಧಾನಮಂತ್ರಿ 30 ದಿನಗಳೊಳಗೆ ವಿಶ್ವಾಸಮತ ಯಾಚಿಸಬೇಕಾಗುತ್ತದೆ. 

  

ಹೊಸ ಸರ್ಕಾರದ ಮೊದಲ ಸಂಸತ್ ಅಧಿವೇಶನ ಇಂದು ಆರಂಭಗೊಂಡಿದೆ. ದೇವುಬಾ ಅವರು ಸಂಸತ್ ನಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸಲಿದ್ದಾರೆ. 

  

ದೇವುಬಾ ಸರ್ಕಾರ ಅಗತ್ಯ ಸದಸ್ಯರ ಬೆಂಬಲ ಪಡೆಯುವಲ್ಲಿ ವಿಫಲವಾದರೆ, ಹಂಗಾಮಿ ಪ್ರಧಾನಿಯನ್ನು ನೇಮಿಸಲಾಗುತ್ತದೆ. ಇದೇ ವೇಳೆ ಸಂಸತ್ ವಿಸರ್ಜಿಸಿ, ಹೊಸದಾಗಿ ಚುನಾವಣೆಯನ್ನು ಘೋಷಿಸಲಾಗುತ್ತದೆ. 

ಸುದ್ದಿ ಓದಿ