ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ಜಿಲ್ಲಾ ಸಮಾವೇಶ
ಲೋಕದರ್ಶನ ವರದಿ
ಹಾವೇರಿ 10: ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ಜಿಲ್ಲಾ ಸಮಾವೇಶ ಮತ್ತು ಸನ್ಮಾನ ಸಮಾರಂಭ ಜರುಗಿತು.
ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಮತ್ತು ಗೆಳೆಯರ ಬಳಗದ ಸಹಯೋಗದೊಂದಿಗೆ ಆಯೋಜಿಸಿದ್ದ ಸಮಾವೇಶವನ್ನು ಭಾರತ ಜ್ಞಾನ ವಿಜ್ಞಾನ ರಾಜ್ಯ ಸಮಿತಿಯ ಸದಸ್ಯರಾದ ಎಫ್ಸಿ ಚೇಗರೆಡ್ಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ತಾತ್ವೀಕ ಭಿನ್ನಾಭಿಪ್ರಾಯಗಳ ನಡುವೆ ಪರಸ್ಪರ ಗೌರವಿಸುತ್ತಲೇ ಬದುಕುವುದು ನಿಜವಾದ ವೈಚಾರಿಕತೆ. ಪ್ರಶ್ನಿಸುವುದರ ಜೊತೆಗೆ ಪುರಾವೆಗಳಿದ್ದಾಗ ಮಾತ್ರ ನಂಬುವುದೇ ವೈಜ್ಞಾನಿಕತೆ. ಪ್ರಶ್ನೆ ಮಾಡುವವರನ್ನು ಕೊಲ್ಲುವುದೆಂದರೆ ನಾವು ನಂಬುವ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಕೊಂದ ಹಾಗೆ.ಈ ನೆಲ ಈ ಜಲ ಈ ಮಣ್ಣು ನಮ್ಮದು ಎನ್ನುವ ನಾವು, ನೆಲ ಎಂದರೆ ಕೇವಲ ಮಣ್ಣಲ್ಲ, ನಮಗೆ ಸಹಬಾಳ್ವೆಯ ಜೀವನ ವಿಧಾನವನ್ನು ಹೇಳಿಕೊಟ್ಟ ನೆಲೆ ಎಂದೇ ಅರ್ಥ. ಇದೇ ಜನ ವಿಜ್ಞಾನ ಸಂಸ್ಕೃತಿ. ಅಸಹಾಯಕ ಮಕ್ಕಳು ಮಹಿಳೆಯರನ್ನು ಕೊಲ್ಲುವ ಸಂಸ್ಕೃತಿ ಬೇಡ ಎಂದರು.
ಈ ಸಂದರ್ಭದಲ್ಲಿ ಮೂರು ದಶಕಗಳಿಂದ ವಿಜ್ಞಾನ ಚಳುವಳಿಯನ್ನು ಕಟ್ಟಿ ಬೆಳೆಸಿದ ನಿವೃತ್ತ ಶಿಕ್ಷಕಿ ರೇಣುಕಾ ಗುಡಿಮನಿಯವರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂದಾನಪ್ಪ ವಡಗೇರಿ ಮಾತನಾಡಿ ಮುಗ್ಧ ಮಕ್ಕಳಲ್ಲಿ ವೈವಾರಿಕತೆಯನ್ನು ಬೆಳೆಸಿದರೆ, ಹಿರಿಯರೂ ಪರಿವರ್ತನೆಯಾಗಲು ಸಾಧ್ಯ. ಈ ದಿಶೆಯಲ್ಲಿ ಗುಡಿಮನಿಯವರ ಪ್ರಯತ್ನ ಬಹಳ ದೊಡ್ಡದು. ಶಿಕ್ಷಣ ಇಲಾಖೆಯ ಗೌರವವನ್ನು ಅವರು ಹೆಚ್ಚಿಸಿದವರು ಎಂದರು.
ಡಯಟ್ ಉಪನ್ಯಾಸಕರಾದ ಎಂಬಿ ಅಂಬಿಗೇರ ಮಾತನಾಡಿ ನಿರಂತರವಾಗಿ ಟೀಚರ್ ಪ್ರತಿಕೆಯ ಮೂಲಕ ಸಮಾಜ ಜಾಗೃತಿಯನ್ನು ಮೂಡಿಸಿದ ಗುಡಿಮನಿಯವರು ಬಡ ಮಕ್ಕಳ ಹಿಂದೆ ಸದಾ ನಿಂತ ತಾಯಿ ಅಂತಃಕರಣದ ಶಿಕ್ಷಕಿಯಾಗಿದ್ದಾರೆ ಎಂದರು.
ಸನ್ಮಾನಕ್ಕೆ ಕೃತಜ್ಞೆತೆ ಸೂಚಿಸಿ ಮಾತನಾಡಿದ ಗುಡಿಮನಿ ಜಿಲ್ಲೆಯ ಜನ ಮತ್ತು ಮುನ್ಸಿಪಲ್ ಹೈಸ್ಕೂಲ್ ನನ್ನ ವ್ಯಕ್ತಿತ್ವಕ್ಕೆ ಒಂದು ಅಸ್ತಿತ್ವ ನೀಡಿವೆ. ಜಾತಿ ಮತ ಭೇದ ಮರೆತು ದುಡಿಯುವ ಶಕ್ತಿಯನ್ನು ಕೊಟ್ಟಿವೆ. ಇನ್ನೂ ಹೆಚ್ಚು ಕೆಲಸ ಮಾಡಲು ಈ ಸನ್ಮಾನ ಪ್ರೇರಣೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಜಿಆರ್ ಗುಡಿ. ಜಿಲ್ಲಾ ಕಾರಾಗೃಹಾಧಿಕಾರಿ ಟಿಬಿ ಭಜಂತ್ರಿ, ನಿವೃತ್ತ ಪ್ರಾಚಾರ್ಯರಾದ ಬಿ ಬಸವರಾಜ, ಬಿ ಜಿ ವ್ಹಿ ಎಸ್ ಜಿಲ್ಲಾ ಅಧ್ಯಕ್ಷರಾದ ಪಿ ಬಿ ಮುದ್ದಿ. ಮುನ್ಸಿಪಲ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶೋಭಾ ಜಾಗಟಗೇರಿ ಹಾಗೂ ಇಂಜನೀಯರ್ ಅಮೀರ ಸೋಹಿಲ್ ಮಾತನಾಡಿದರು.
ಆರಂಭದಲ್ಲಿ ಎಬಿ ಗುಡ್ಡಳ್ಳಿ, ಮಹಾಂತೇಶ ಮರಿಗೂಳಪ್ಪನವರ, ಶಂಕರ ತುಮ್ಮಣ್ಣನವರ, ಭಾರತಿ ಯಾವಗಲ್, ವಿಜ್ಞಾನ ಗೀತೆ ಹಾಡಿದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಬಿಜಿವ್ಹಿಎಸ್ ಜಿಲ್ಲಾ ಕಾರ್ಯದಶರ್ಿ ಆರ್ ಸಿ ನಂದಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 