ಮಾರ್ಚ್ 2 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ನೆದರ್‌ಲ್ಯಾಂಡ್ಸ್
ಅಮ್ಸಟರ್ ಡ್ಯಾಮ್, ಫೆಬ್ರವರಿ 3 : ದೇಶದಲ್ಲಿ ಕರೋನ ಸೋಂಕು ನಿಯಂತ್ರಿಸಿ ಮೂರನೇ ಅಲೆ ಬಾರದಂತೆ ತಡೆಯಲು ಲಾಕ್‌ಡೌನ್ ಅವಧಿಯನ್ನು ಮಂದಿನ ತಿಂಗಳ 2 ರವರೆಗೆ ವಿಸ್ತರಿಸಲು ನೆದರ್‌ಲ್ಯಾಂಡ್ಸ್ ಸರ್ಕಾರ ನಿರ್ಧರಿಸಿದೆ ಎಂದು ಡಚ್ ನ್ಯೂಸ್ ಪ್ರಧಾನಿ ಮಾರ್ಕ್ ರುಟ್ಟೆಯನ್ನು ಉಲ್ಲೇಖಿಸಿಮಾದ್ಯಮ ವರದಿ ಮಾಡಿದೆ.ಯುಕೆ ಹೊಸ ರೂಪಾಂತರಿ ಕೊರೊನಾ ಸೋಂಕು ಹರಡುವಿಕೆ ಪ್ರಕರಣ ಕ್ಷೀಣಿಸುತ್ತಿದ್ದರೂ ಘಟನೆಯ ಬೆಳವಣಿಗೆಯ ಮೂರನೇ ಅಲೆಗೆ ಸಮೀಪಿಸುವುದನ್ನು ನಿಯಂತ್ರಿಸಬೇಕಿದೆ ಎಂದು ರುಟ್ಟೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಅವಧಿನ್ನು ಮಾರ್ಚ್ 2 ರವರೆಗೆ ವಿಸ್ತರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ನಿರಂತರವಾಗಿ ಹೊಸ ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಆಡಳಿತದ ಜವಾಬ್ದಾರಿಯಾಗಿದ್ದು . ಲಾಕ್‌ಡೌನ್ ವಿಸ್ತರಿಸುವ ನಿರ್ಧಾರವನ್ನು ಇದೆ 23 ರಂದು ಮತ್ತೆ ಪರಿಶೀಲಿಸಬಹುದು. ಎಂದು ಹೇಳಿದರು.