ಬಕ್ರೀದ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಮುಸ್ಲಿಮ್ ಬಾಂಧವರು ಸಾಮೂಹಿಕ ಪ್ರಾರ್ಥನೆ
Muslim community offers mass prayers at Eidgah Maidan as part of Bakrid festival
ಲೋಕದರ್ಶನ ವರದಿ
ಉಗರಗೋಳ 28 : ತಾಲೂಕಿನ ಉಗರಗೋಳ, ಹಿರೇಕುಂಬಿ, ಚಿಕ್ಕುಂಬಿ, ಚುಳಕಿ ಗ್ರಾಮಗಳಲ್ಲಿ ಮುಸ್ಲಿಮ್ ಬಾಂಧವರು ಗುರುವಾರ ಸರಳವಾಗಿ ಬಕ್ರೀದ್ ಹಬ್ಬ ಆಚರಿಸಿದರು. ಆಯಾ ಗ್ರಾಮಗಳ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ನಮಾಜ್ ಮಾಡಿ, ಸಕಲ ಜೀವರಾಶಿ ಒಳಿತಿಗೆ ಸರ್ವಶ್ರೇಷ್ಠ ಅಲ್ಲಾಹ್ ದೇವರಲ್ಲಿ ಪ್ರಾರ್ಥಿಸಿದರು.
ಚಿಕ್ಕುಂಬಿ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಮ್ ಬಾಂಧವರು ಪ್ರಾರ್ಥನೆ ಸಲ್ಲಿಸಿದ ನಂತರ ಸಂದೇಶ ಸಾರಿದ ಧರ್ಮಗುರು ಮೌಲಾವಲಿ ಮುಲ್ಲಾನವರ ಅವರು, ಇಸ್ಲಾಂ ಧರ್ಮ ಶಾಂತಿ, ಸಹೋದರತ್ವ ಭಾವ ಸಾರುತ್ತದೆ. ಮುಸ್ಲಿಮರು ಧರ್ಮದ ಆಚರಣೆಗಳನ್ನು ಪಾಲಿಸುವ ಜತೆಗೆ, ಸಮಾಜದಲ್ಲಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬಾಳಬೇಕು ಎಂದು ಹೇಳಿದರು. ಸಮಸ್ತ ಮುಸ್ಲಿಂ ಬಾಂದವರೆಲ್ಲಾ ಸೇರಿಸಾಮೂಹಿಕ ಪ್ರಾರ್ಥಿನೆ ಸಲ್ಲಿಸಿದರು. ನಂತರ ಪರಸ್ಪರರು ಬಕ್ರೀದ್ ಹಬ್ಬದ ಶುಭಶಯಗಳನ್ನು ವಿನಿಮಯ ಮಾಡಿಕೊಂಡರು.
ಮಹಮ್ಮದ್‌ಅಲಿ ದೊಡಮನಿ, ನಭಿಸಾಬ್ ಅಸ್ತಖಾನ, ನಭೀಸಾಬ್ ದೊಡಮನಿ, ಮಕ್ತುಮಸಾಬ್ ದೊಡಮನಿ, ಆರ್.ಎಂ.ನರಗುಂದ, ಶಬ್ಬೀರ್ ಜಮಾದಾರ, ಹುಸೇನಸಾಬ್ ದೊಡಮನಿ, ಇಸ್ಮಾಯಿಲ್ ದೊಡಮನಿ, ಜಂಗ್ಲಿಸಾಬ್ ದೊಡಮನಿ, ರಾಜೇಸಾಬ್ ನದಾಫ್, ಮಹಮ್ಮದ್‌ರಫಿ ನರಗುಂದ, ಕರೀಮ್‌ಸಾಬ ನಧಾಪ್, ಹುಸೇನಸಾಬ್ ಅಲ್ಲಿಸಾಬನವರ, ರಜಾಕ್ ಕುಷ್ಟಗಿ, ಮಾಬುಸಾಬ ಸವಣೂರ ಬುಡ್ಡೆಸಾಬ್ ದೊಡಮನಿ ಹಾಗೂ ಇತರರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 