ಸವದತ್ತಿಯಲ್ಲಿ ಸಡಗರದ ಬಕ್ರೀದ್ ಆಚರಣೆ ತ್ಯಾಗ ಬಲಿದಾನದ ಸಂದೇಶ ಸಾರಿದ ಮುಸ್ಲಿಂ ಬಾಂಧವರು

ಸವದತ್ತಿಯಲ್ಲಿ ಸಡಗರದ ಬಕ್ರೀದ್ ಆಚರಣೆ ತ್ಯಾಗ ಬಲಿದಾನದ ಸಂದೇಶ ಸಾರಿದ ಮುಸ್ಲಿಂ ಬಾಂಧವರು Muslim brothers and sisters spread the message of sacrifice and sacrifice during the Bakrid celebrat

ಸವದತ್ತಿ  28: ತ್ಯಾಗ ಮತ್ತು ಬಲಿದಾನದ ಸಂಕೇತವಾದ  ಬಕ್ರೀದ್ (ಈದ್‌-ಉಲ್‌-ಅದಾ) ಹಬ್ಬವನ್ನು ನಗರದ ಮುಸ್ಲಿಂ ಬಾಂಧವರು ಗುರುವಾರ ಅತ್ಯಂತ ಸಂಭ್ರಮ, ಸಡಗರ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಇಲ್ಲಿನ ರಾಮಾಪೂರಸೈಟ್  ನೂರಾನಿ ಜಾಮಿಯಾ ಮಸೀದಿಯ ಬಳಿ ಸಮಾವೇಶಗೊಂಡ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು, ಅಲ್ಲಾಹನ ನಾಮಸ್ಮರಣೆ ಪಠಿಸುತ್ತಾ ಜೂಲೂಸ್ ಮೂಲಕ ರಾಮಾಪೂರಸೈಟ್ ಈದ್ಗಾ ಮೈದಾನಕ್ಕೆ ತೆರಳಿದರು.ಅಲ್ಲಿ ಸೇರಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸಾಮೂಹಿಕವಾಗಿ ನಮಾಜ್ ಸಲ್ಲಿಸಿ, ದೇಶದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.

ನಮಾಜ್ ನಂತರ ಧರ್ಮಗುರು ಮೌಲಾನಾ ನೂರ ಮುಹಮ್ಮದ್ ಮಾತನಾಡಿದ ಅವರು  ಹಬ್ಬದ ಸಂದೇಶ ನೀಡುತ್ತಾ,  ಪ್ರವಾದಿ ಇಬ್ರಾಹಿಂ ಅವರು ದೇವರಿಗೆ ತಮ್ಮ ಪ್ರಿಯವಾದದ್ದನ್ನೇ ತ್ಯಾಗ ಮಾಡಲು ಸಿದ್ಧರಾಗಿದ್ದನ್ನು ಈ ಹಬ್ಬ ನೆನಪಿಸುತ್ತದೆ. ದಾನ ಧರ್ಮ ಹಾಗೂ ತ್ಯಾಗ ಮನೋಭಾವನೆ ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯವಾಗಿದೆ. ಸಮಾಜದಲ್ಲಿ ನಾವೆಲ್ಲರೂ ಜಾತಿ ಮತಗಳ ಬೇಧ ಮರೆತು ಪರಸ್ಪರ ಸಹೋದರರಂತೆ ಬಾಳಬೇಕು, ಎಂದು ಕರೆ ನೀಡಿದರು.

ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪುಗೆ ನೀಡುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಬಂಧು-ಮಿತ್ರರ ಮನೆಗಳಿಗೆ ತೆರಳಿ, ಸಿಹಿ ಪಾಯಸ ಸವಿಯುತ್ತಾ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಂಚಾರಕ್ಕೆ ಅಡಚಣೆಯಾಗದಂತೆ, ಈದ್ಗಾ ಮೈದಾನದ ಸುತ್ತಮುತ್ತ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಸಮಾಜದ ಅಪಾರ ಸಂಖ್ಯೆಯ ಭಕ್ತರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.