ಹುಕ್ಕೇರಿ

ಶ್ರೀರಾಮಗಿರಿ ಮಹಾರಾಜ್ ಹೇಳಿಕೆ ಖಂಡಿಸಿ ಮುಸ್ಲಿಂ ಜಮಾತ ಪ್ರತಿಭಟನೆ

ಶ್ರೀರಾಮಗಿರಿ ಮಹಾರಾಜ್ ಹೇಳಿಕೆ ಖಂಡಿಸಿ ಮುಸ್ಲಿಂ ಜಮಾತ ಪ್ರತಿಭಟನೆ

ಹುಕ್ಕೇರಿ 27: ಮೊಹಮ್ಮದ್ ಪೈಗಂಬರ್ ಅವರ ಕುರಿತು ಕಾರ್ಯಕ್ರಮದಲ್ಲಿ ಶ್ರೀರಾಮುಗಿರಿ ಮಹಾರಾಜ್ ಇವರು ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಬಗ್ಗೆ ಅವಹೇನಕಾರಿ ಪದ ಬಳಕೆ ಮಾಡಿ ಅವಮಾನ ಮಾಡಿದ್ದು ಶ್ರೀರಾಮುಗಿರಿ ಮಹಾರಾಜನನ್ನು ಶೀಘ್ರ ಬಂಧಿಸಬೇಕು ಆತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು 11 ಜಮಾತದ ಮುಸ್ಲಿಂ ಬಾಂಧವರು ಹಿರಿಯರು ಯುವಕರು ಸೇರಿ ಮಾ ಮಾಸಾಬಿ ದರ್ಗಾದಿಂದ ಪ್ರತಿಭಟನಾಕಾರರು ಬಸ್ ನಿಲ್ದಾಣ.ಕೋರ್ಟ್‌ ಸರ್ಕಲ ಮುಖಾಂತರ ಪೊಲೀಸ್ ಇಲಾಖೆ ಇವರಿಗೆ  ಶ್ರೀ ರಾಮಗಿರಿ  ಮಹರಾಜ್ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಲ್ಲಿಂದ ತಹಸಿಲ್ದಾರ್ ಕಚೇರಿಗೆ ಹೋಗಿ ಮಾನ್ಯ ತಶಿಲ್ದಾರಾದ  ಮಂಜುಳಾ ನಾಯಕ್ ಇವರ ಮುಖಾಂತರ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಶ್ರೀ ರಾಮ್ ಗಿರಿ ಮಹಾರಾಜನನ್ನು ಬಂಧಿಸಬೇಕೆಂದು ಮನವಿ ಪತ್ರ ಮೂಲಕ ವಿನಂತಿಸಿದರು.

ಈ ಸಂದರ್ಭದಲ್ಲಿ ಮೌಲಾನಾ ಹಾಜಿ. ಸಯ್ಯದ್ ಕುತ್ಬುದ್ದೀನ್ ರಿಜವಿ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಶ್ರೀ ರಾಮಗಿರಿ ಮಹಾರಾಜ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಹುಕ್ಕೇರಿ 11 ಜಮಾತದ ಅಧ್ಯಕ್ಷರಗಳ ನೇತೃತ್ವದಲ್ಲಿ ಹಾಗೂ ಊರಿನ ಹಿರಿಯರು ಹಾಗೂ ಯುವಜನರ ಸಾಮೋಹದಲ್ಲಿ ತಹಶೀಲ್ದಾರ್ ಗೆ ಮನವಿ ನೀಡಲಾಯಿತು ಅಲ್ಲಿಂದ ಯಾರಿಗೂ ಏನು ಅನ್ನದ ಹಾಗೆ ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಬೇಕೆಂದು ಮನವಿ ಈ ಪ್ರತಿಭಟನೆಯನ್ನು ಇಲ್ಲಿಗೆ ಕೈ ಬಿಡಲಾಯಿತು ಈ ಸಂದರ್ಭದಲ್ಲಿ ಮುಸ್ಲಿಂ ಜಮಾತದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದರು.. 


ಸುದ್ದಿ ಓದಿ